ಹುಬ್ಬಳ್ಳಿ: ನಗರದ ಕೇಶ್ವಾಪುರ ರಸ್ತೆಯಲ್ಲಿರುವ ಅಖಿಲ ಭಾರತ ಹಿಂದುಳಿದ ವರ್ಗಗಳ ರೈಲ್ವೇ ನೌಕರರ ಸಂಘದ ಕಚೇರಿಯಲ್ಲಿ ಸಮಾಜ ಸುಧಾರಕ ಹಾಗೂ ಸಮಾನತೆಯ ಹರಿಕಾರರಾಗಿರುವ ಮಹಾನಾಯಕ ಮಹಾತ್ಮಾ ಜ್ಯೋತಿಬಾ ಪುಲೆ ಅವರ 198ನೇ ಜಯಂತಿಯನ್ನ ಭಕ್ತಿ ಭಯದಿಂದ ಹಾಗೂ ಉತ್ಸಾಹದಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಚಿಕ್ಕೋಡಿ: ಕುರಿಗಾಹಿ ಯುವಕನ ಯುಪಿಎಸ್ಸಿ ಸಾಧನೆ – ದೇಶದಲ್ಲೇ 551ನೇ ರ್ಯಾಂಕ್!
ಶಾಸಕ ಮಹೇಶ್ ಟೆಂಗಿನಕಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಹಾತ್ಮ ಪುಲೆ ಅವರ ಸಮಾಜ ಪರಿವರ್ತನೆಗೆ ನೀಡಿದ ಅಮೂಲ್ಯ ಆಗಿದ್ದು ಅವರ ಸಂದೇಶ ದ ಸರ್ವಕಾಲಿಕ ಎಂದರು.
ಅಖಿಲ ಭಾರತ ಹಿಂದುಳಿದ ವರ್ಗಗಳ ರೈಲ್ವೇ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಎಐಒಬಿಸಿಯ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಶ್, ಪ್ರಧಾನ ಕಾರ್ಯದರ್ಶಿಗಳಾದ ಗೋವರ್ಧನ, ಕಾರ್ಯಾಧ್ಯಕ್ಷರಾದ ರೇವಪ್ಪ ಎಳಮಲಿ ಹಾಗೂ ಪ್ರಮುಖರಾದ ಪಣೀಂದ್ರನಾಥ್, ವಿಜಯಕುಮಾರ ಯಾದವ, ವಿಠಲ್ ಎಕ್ಕೊಟೆ, ವೈ. ರಾಜಕುಮಾರ, ಯಲ್ಲಪ್ಪ ಜಗ್ಗಣ್ಣನವರ, ಜನಾರ್ದನ ಬೆಂಗಳೂರು ಹಾಗೂ ಮೈಸೂರು ವಿಭಾಗದ ಪದಾಧಿಕಾರಿಗಳು ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.