ಅಥ ಣಿ:- ಜಮ್ಮು-ಕಾಶ್ಮೀರದ ಪೆಹೆಲ್ಗಾಂ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಥಣಿ ಬೀದಿ ಬದಿ ವ್ಯಾಪಾರಿಗಳ ಸಂಘ ವತಿಯಿಂದ ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಕೋಲಾರ: ಗಂಡನ ಮನೆಯಲ್ಲಿ ಮದ್ವೆಯಾಗಿ ಒಂದೇ ವರ್ಷಕ್ಕೆ ನೇಣಿಗೆ ಕೊರಳೊಡ್ಡಿದ ಗೃಹಿಣಿ!
ಮಾನವೀಯತೆಯ ಮೇಲಿನ ದಾಳಿ ಇದಾಗಿದ್ದು, ಭಾರತದಲ್ಲಿರುವ ನಾವು ಹಿಂದೂ ಮುಸ್ಲಿಂ ಬಾಯಿ ಬಾಯಿ ಎಂದು ವಿವಿಧತೆಯಲ್ಲಿ ಏಕತೆಯಿಂದ ಬದುಕುತ್ತಿದ್ದು ಶಾಂತಿ ಕದಡುವ ಹುನ್ನಾರವನ್ನು ನಡೆಸುತ್ತಿರುವ ಕೆಲವು ಕ್ಷುದ್ರಶಕ್ತಿಗಳನ್ನು ಕೇಂದ್ರ ಸರ್ಕಾರ ಕೂಡಲೇ ಹೆಮ್ಮೆಟ್ಟಿಸುವ ಕೆಲಸವನ್ನು ಮಾಡಬೇಕು ಮತ್ತು ವಿದ್ವಾಂಸಕ ಕೃತ್ಯದಲ್ಲಿ ತೊಡಗಿದವರನ್ನು ಸಾಧ್ಯವಾದರೆ ಬಂಧಿಸಿ ಸಾರ್ವಜನಿಕವಾಗಿ ಅವರ ದೇಹದ ಅಂಗಗಳನ್ನು ಕತ್ತರಿಸುವ ಮೂಲಕ ಕಠಿಣ ಕ್ರಮ ತೀರಿಸಿ ಭಯೋತ್ಪಾದನೆ ಕೃತ್ಯಕ್ಕೆ ಕಠಿಣ ಶಿಕ್ಷೆ ಇದೆ ಎಂಬುದನ್ನು ಸಾಬೀತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಅಥಣಿ ಪಟ್ಟಣದ ನೂರಾರು ಬೀದಿಬದಿಯ ವ್ಯಾಪಾರಸ್ಥರು ಭಾಗಿಯಾಗಿದ್ದು ಮುರುಗೇಂದ್ರ ಬ್ಯಾಂಕ್ ನಿಂದ ಆರಂಭವಾದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯು ಅಂಬೇಡ್ಕರ್ ವೃತ್ತದಲ್ಲಿ ಸಮಾರೋಪಗೊಂಡಿತು. ಈ ವೇಳೆ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮನಸೂರ ಭಾಗವಾನ, ಉಪಾಧ್ಯಕ್ಷ ಮಹಾನಿಂಗ ಭಜಂತ್ರಿ,ಕಾರ್ಯದರ್ಶಿ
ಶ್ರೀನಿವಾಸ ಶೆಟ್ಟ, ಖಜಾಂಚಿಯಾದ ರಜಾಕ್ ಭಾಗವಾನ ಮತ್ತು ಬೀದಿ ಬದಿ ವ್ಯಾಪಾರಸ್ಥರಾದ ವಸೀಮ್ ಪಟವೇಗಾರ,
ರಘುಪಟ್ಟಣ,ಶ್ರೀಕಾಂತ ಭಜಂತ್ರಿ,ಯುನೂಸ್ ಭಾಗವಾನ,ಗುಲಾಬ್ ಕಾಂಬಳೆ,ಚಂದ್ರಕಾಂತ ಭಜಂತ್ರಿ ಸಲಾವುದ್ದೀನ ರಾಮಪೂರೆ,ಫಯಾಜ ಸಾತಬಚ್ಚೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.