ರಾಯಚೂರು:- 9 ತಿಂಗಳ ತುಂಬು ಗರ್ಭಿಣಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ಜರುಗಿದೆ. ಘಟನೆ ಸಂಬಂಧ ಗೃಹಿಣಿಯ ಪತಿಯನ್ನು ಅರೆಸ್ಟ್ ಮಾಡಲಾಗಿದೆ.
ಈ ರಾಶಿಯವರಿಗೆ ಏನೋ ಒಂದು ರೀತಿಯ ಭಯ: ಶನಿವಾರದ ರಾಶಿ ಭವಿಷ್ಯ 26 ಏಪ್ರಿಲ್ 2025!
ಅನುಪಮ ಮೃತ ಮಹಿಳೆ. ಈಕೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾವಿನ ಸುತ್ತ ಸಾಕಷ್ಟು ಅನುಮಾನ ಮೂಡಿದ್ದು, ಅನುಮಾನದ ಮೇರೆಗೆ ಪೊಲೀಸರು ಮಹಿಳೆ ಪತಿಯನ್ನು ಬಂಧಿಸಿದ್ದಾರೆ.
ಅನುಪಮಾ ಹಾಗೂ ರಾಯಚೂರಿನ ಬೂದಿಹಾಳದ ನಾಗರಾಜ್ ಇನ್ಸ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಬಳಿಕ 11 ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ, ಅದೇನಾಯ್ತೋ ಏನೋ ಅನುಪಮ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಲಾಗಿದೆ. ಆದ್ರೆ, ಜಾತಿ ಹಾಗೂ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಅನುಪಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆ ಪೋಷಕರು ಆರೋಪಿಸಿದ್ದಾರೆ.
ನಾಗರಾಜ್ ಮನೆಯವರು ಜಾತಿ ಬೇರೆ, ವರದಕ್ಷಿಣೆ ತಂದಿಲ್ಲವೆಂದು ಕಿರುಕುಳ ನೀಡುತ್ತಿದ್ದರು. ಗಂಡನ ಮನೆಯವರ ಕಿರುಕುಳ, ಹಿಂಸೆಯಿಂದಲೇ ತಮ್ಮ ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಅನುಪಮಾ ತಂದೆ ಆರೋಪಿಸಿದ್ದು, ಅನುಪಮಾ ಪತಿ ನಾಗರಾಜ್ ಸೇರಿ 6 ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.