ಸ್ವೀಟ್ಸ್ ಅಂದ್ರೆ ಸಾಕು ಕೆಲವರು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಇನ್ನು ಕೆಲವೊಬ್ಬರಿಗೆ ಸ್ವೀಟ್ಸ್ ಅಂದ್ರೆ ಅಷ್ಟು ಇಷ್ಟ ಇಲ್ಲಾಂದ್ರೂ ಮಧ್ಯಾಹ್ನದ ಊಟ, ರಾತ್ರಿಯ ಊಟ ಮಾಡಿ ಸ್ವೀಟ್ಸ್ ಕೊಟ್ರೆ ಸೈ ಅಂತಾರೆ. ಕೆಲವೊಂದು ಸಾರಿ ಅದೆಷ್ಟು ಊಟ ಮಾಡಿದ್ರೂ, ಸ್ನ್ಯಾಕ್ಸ್ ತಿಂದ್ರೂ ಥಟ್ಟಂತ ಏನಾದ್ರೂ ಸ್ವೀಟ್ಸ್ ತಿನ್ನೋಣ ಅನ್ನೋ ಬಯಕೆ ಕಾಡೋದಿದೆ.
ಇನ್ನೂ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ರಸಗುಲ್ಲಾ ಅಂದ್ರೆ ತುಂಬಾ ಇಷ್ಟ. ಈ ಸಿಹಿಯಾದ ತಿಂಡಿ. ಯಾವುದೇ ದಿಕ್ಕಿನಿಂದ ನೋಡಿದರೂ ಗುಂಡಾಗಿ ಬಿಳಿಯಾಗಿರುವ ಈ ಸಿಹಿಯನ್ನು ತಿನ್ನುವುದರಲ್ಲಿ ಸಿಗುವ ಖುಷಿಯೇ ಬೇರೆ
ಖುಷಿಯಲ್ಲಿದ್ದಾಗ ಕೆಲ ಮಂದಿ ರಸಗುಲ್ಲಾ ಹಂಚಿ ತಿನ್ನಲು ಇಷ್ಟಪಡುತ್ತಾರೆ. ಅದೇ ರೀತಿ ಕೋಪ ಅಥವಾ ದುಃಖದಲ್ಲಿರುವವರಿಗೆ ರಸಗುಲ್ಲಾ ನೀಡಿದರೆ ಸಾಕು ತಕ್ಷಣವೇ ತಣ್ಣಗಾಗಿ ಸಮಾಧಾನಗೊಳ್ಳುತ್ತಾರೆ. ರಸಗುಲ್ಲಾಗೆ ರಸಗುಲ್ಲಾವೇ ಸಾಟಿ. ಬೇರೆ ತಿಂಡಿಗಳಿಗೆ ಹೋಲಿಸಿದರೆ ರಸಗುಲ್ಲಾ ಯಾವುದೇ ಸಿಹಿ ತಿಂಡಿಗಳಿಗೂ ಕಡಿಮೆ ಇಲ್ಲ ಎಂದೇ ಹೇಳಬಹುದು.
ವಾಸ್ತವವಾಗಿ, ಇದೊಂದು ಬೆಂಗಾಲಿ ಸ್ವೀಟ್ ಆಗಿದ್ದು, ಬಂಗಾಳಿಗರ ಜೀವನದೊಂದಿಗೆ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ. ಈ ದುಂಡಗಿನ, ರಸಭರಿತವಾದ, ನೋಡಲು ಆಟಿಕೆಯ ಆಕಾರದಲ್ಲಿರುವ ಈ ಸಿಹಿ ತಿಂಡಿಯ ಬಗ್ಗೆ ಅನೇಕ ಕಥೆ-ಪುರಾಣಗಳಿದ್ದು, ಅವುಗಳ ಬಗ್ಗೆ ಹೇಳುತ್ತಾ ಹೋದರೆ ಕೊನೆಯೇ ಇಲ್ಲ ಅಂತ ಹೇಳಬಹದು. ಬಹಳಷ್ಟು ಸ್ವೀಟ್ ಅಂಗಡಿ ಹಾಗೂ ಬೇಕರಿ, ರೆಸ್ಟೊರೆಂಟ್ಗಳಲ್ಲಿ ಕಂಡು ಬರುವ ಈ ಸಿಹಿ ತಿಂಡಿಯನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು.
ಯಾವುದಾದರೆ ಶುಭ ಸಮಾರಂಭ, ಶುಭ ಸುದ್ದಿಯನ್ನು ಹೇಳುವಾಗ ಅಥವಾ ಉಡುಗೊರೆ ನೀಡಸುವಾಗ ಈ ಅನೇಕ ಮಂದಿ ಈ ಸಿಹಿತಿಂಡಿಯನ್ನು ನೀಡುತ್ತಾರೆ. ಇದನ್ನೂ ನೋಡಿದ ತಕ್ಷಣ ಎಂಥಹ ಸಮಸ್ಯೆಗಳಿಂದ ಇರುವವರ ಮುಖದಲ್ಲಿ ಮಂದಹಾಸ ಮೂಡಿಸುವ ಸಾಮಾರ್ಥ್ಯ ರಸಗುಲ್ಲಾಕ್ಕಿದೆ. ಇತರ ಎಲ್ಲ ಸಿಹಿ ತಿನಿಸುಗಳಿಗಿಂತ 10 ಅಂಕ ಹೆಚ್ಚೇ ಇದಕ್ಕಿದೆ.
ಎಲ್ಲಕ್ಕಿಂತ ಮುಖ್ಯವಾಗಿ ರಸಗುಲ್ಲಾ ವಿಚಾರವಾಗಿ ಬಂಗಾಳ ಮತ್ತು ಒಡಿಶಾ ರಾಜ್ಯಗಳ ನಡುವೆ ಗದ್ದಲವಿದೆ. ಏಕೆಂದರೆ ರಸಗುಲ್ಲಾ ತಮ್ಮ ಪ್ರದೇಶಿಕ ಸಿಹಿ ತಿಂಡಿ ಬಂಗಾಳ ಹೇಳಿದರೆ, ಒಡಿಶಾದವರು ರಸಗುಲ್ಲಾ ತಯಾರಿಸಿದ್ದು ಮೊದಲು ನಮ್ಮ ರಾಜ್ಯದಲ್ಲೇ ಎಂದು ಎರಡು ರಾಜ್ಯಗಳ ಹಗ್ಗಜಗ್ಗಾಟ ನಡೆಯುತ್ತಿತ್ತು. ಆದರೆ ಕೊನೆಗೆ ಪಶ್ಚಿಮ ಬಂಗಾಳ ಈ ವಾಗ್ವಾದದಲ್ಲಿ ಗೆದ್ದು ಭೌಗೋಳಿಕ ಸೂಚನೆ ಪಡೆಯಿತು.
ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಬಂಗಾಳಿಗರ ನೆಚ್ಚಿನ ಈ ಸಿಹಿ ತಿಂಡಿಯನ್ನು ಇಂಗ್ಲಿಷಿನಲ್ಲಿ ಏನೆಂದು ಕರೆಯಲಾಗುತ್ತದೆ? ರಸಗುಲ್ಲಾ ಬದಲಿಗೆ ಇದನ್ನು ಮತ್ತೊಂದು ರೀತಿ ಕರೆಯುವುದು ಹೇಗೆ| ಉತ್ತರ ಭಾರತೀಯರು ಇಟ್ಟಿರುವ ರಸಗುಲ್ಲಾದ ಇಂಗ್ಲಿಷಿನ ಹೆಸರೇನು ಅಂತ ನಾವಿಂದು ತಿಳಿಯೋಣ ಬನ್ನಿ.
ಸದ್ಯ ಶೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿರುವ ಈ ಪ್ರಶ್ನೆಗೆ ಉತ್ತರಿಸುವಲ್ಲಿ ಸುಮಾರು ಶೇಕಡಾ 99 ರಷ್ಟು ಜನರು ಎಡವಿದ್ದಾರೆ. ಸರಿಯಾದ ಉತ್ತರ ನೀಡಲು ಅನೇಕ ಮಂದಿ ನಾನಾ ಸರ್ಕಸ್ಗಳನ್ನು ಮಾಡಿ, ಸುಸ್ತಾಗಿದ್ದಾರೆ. ಏಕೆಂದರೆ ರಸಗೊಲ್ಲ ತಿನ್ನುವಾಗ ಸಿಗುವ ಮಜಾ, ಈ ಪ್ರಶ್ನೆಗೆ ಉತ್ತರ ನೀಡುವಾಗ ಕಣ್ಣಲ್ಲಿ ನೀರು ತರಿಸುವಷ್ಟರ ಮಟ್ಟಿಗೆ ಕಷ್ಟಕರವಾಗಿದೆ.
ನಿಜಕ್ಕೂ ರಸಗುಲ್ಲಾವನ್ನು ಇಂಗ್ಲಿಷ್ನಲ್ಲಿ ಸಿರಪ್ ಫೀಲ್ಡ್ ರೋಲ್ ಎಂದು ಕರೆಯಲಾಗುತ್ತದೆ. ಆದರೆ, ಗೂಗಲ್ನಲ್ಲಿ ರಸಗುಲ್ಲಾ ಅಂತ ಟೈಪ್ ಮಾಡಿದರೆ ರಸಗುಲ್ಲಾ ಎಂದೇ ಬರುತ್ತದೆ. ಆದರೆ ಇದರ ಸರಿಯಾದ ಇಂಗ್ಲಿಷ್ ಹೆಸರು ‘ಸಿರಪ್ ಫೀಲ್ಡ್ ರೋಲ್’. ಆದರೆ ಈ ಬಗ್ಗೆ ಇಂದಿಗೂ ಅನೇಕ ಮಂದಿಗೆ ತಿಳಿದಿಲ್ಲ..