ದೇವನಹಳ್ಳಿ: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ದಕ್ಷಿಣ ಭಾರತದ ಅತಿದೊಡ್ಡ ಲಾಜೆಸ್ಟಿಕ್ ಪಾರ್ಕ್ ಕೆಐಎಬಿಯಲ್ಲಿ ಉದ್ಘಾಟನೆ ಆಗಿದ್ದು, ಏರ್ ಇಂಡಿಯಾ ಸ್ಯಾಟ್ಸ್ ಚೇರ್ಮಾನ್ ನಿಪುನ್ ಅರ್ಗವಾಲ್, ಬಾಬ್ ಚೀ ಮತ್ತು ಏರ್ಪೋಟ್ ಎಂಡಿ ಹರಮರನ್ ಅವರಿಂದ ದೀಪ ಬೆಳಗಿಸುವ ಮೂಲಕ ಚಾಲನೆ ದೊರೆತಿದೆ.
ಸ್ವೀಟ್ ಪ್ರಿಯರೇ ನಿಮಗಿದು ಗೊತ್ತಾ!? ರಸಭರಿತವಾದ ರಸಗುಲ್ಲಾಗೆ ಇಂಗ್ಲೀಷಿನಲ್ಲಿ ಏನಂತಾರೆ!?
ಕೆಐಎಬಿಯು, ದೇಶದಲ್ಲೆ ಮೂರನೆ ಅತಿದೊಡ್ಡ ಬ್ಯುಸಿಯೆಸ್ಟ್ ಏರ್ಪೋಟ್ ಆಗಿದ್ದು, 502.480 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡ್ತಿದ್ದು 2030 ಕ್ಕೆ 1 ಮಿಲಿಯನ್ ಮೆಟ್ರಿಕ್ ಟನ್ ಕಾರ್ಗೋ ಗುರಿ ಹೊಂದಿದೆ. 2 ಲಕ್ಷ 40 ಸಾವಿರ ಚದರ ಅಡಿಗಳ ನೂತನ ಲಾಜೆಸ್ಟಿಕ್ ಏರ್ ಇಂಡಿಯಾ ಸ್ಯಾಟ್ಸ್ ಪಾರ್ಕ್ ಉದ್ಘಾಟಿಸಲಾಗಿದ್ದು, 11 ಸಾವಿರ ಚದರ ಅಡಿಯ ಜನರಲ್ ವೇರ್ ಹೌಸ್, 24 ಸಾವಿರ ಚದರ ಅಡಿಯ ಕಛೇರಿ, ಕೋಲ್ಡ್ ಸ್ಟೋರೇಜ್, ಏಕ್ಸಪ್ರೇಸ್ ಕೊರಿಯರ್, ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಲಾಜೆಸ್ಟಿಕ್ ಪಾರ್ಕ್ ಇದಾಗಿದೆ.