ಭಾರತೀಯ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಜನಿಕಾಂತ್ ಕೆಲಮೊಮ್ಮೆ ಸರಳತೆಯಿಂದ ಗಮನಸೆಳೆಯುತ್ತಾರೆ. ನೂರಾರು ಕೋಟಿ ಒಡೆಯನಾಗಿರುವ ತಲೈವರ್ ತಮ್ಮದೇ 8 ಕೋಟಿ ಪ್ರೈವೇಟ್ ಜೆಟ್ ಹೊಂದಿದ್ದಾರೆ. ಆದರೂ ಎಕಾನಮಿ ಫ್ಲೈಟ್ ಏರಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೂಪರ್ ಸ್ಟಾರ್ ತಲೈವರ್ ತಮ್ಮದೇ ಖಾಸಗಿ ಜೆಟ್ ಹೊಂದಿದ್ದಾರೆ. ಅವರು ಮಾತ್ರವಲ್ಲ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ, ರಾಮ್ ಚರಣ್, ಅಕ್ಕಿನೇನಿ ನಾಗಾರ್ಜುನ್, ಪವನ್, ಪ್ರಭಾಸ್ ಹೀಗೆ ಬಹುತೇಕರು ತಮ್ಮ ಖಾಸಗಿ ಜೆಟ್ ನಲ್ಲಿ ಪ್ರಯಾಣಿಸುವುದೇ ಸರ್ವೇ ಸಾಮಾನ್ಯ. ಆದ್ರೆ ರಜನಿಕಾಂತ್ ಕೇರಳದಲ್ಲಿ ಚೆನ್ನೈಗೆ ಎಕಾನಮಿ ಫ್ಲೈಟ್ ನಲ್ಲಿ ಪ್ರಯಾಣಿಸಿದ್ದಾರೆ. ರಜನಿ ಕಂಡು ಅಭಿಮಾನಿಗಳು ಚಕಿತರಾಗಿದ್ದು. ಈ ವೇಳೆ ತಲೈವರ್ ಕೈಬೀಸಿ ಅಭಿಮಾನಿಗಳಿಗೆ ವಿನ್ರಮವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕೇರಳದಲ್ಲಿ ಕಳೆದೊಂದು ವಾರದಿಂದ ಜೈಲರ್ 2 ಶೂಟಿಂಗ್ ನಡೆಯುತ್ತಿತ್ತು. ಚಿತ್ರೀಕರಣಕ್ಕಾಗಿ ಅಲಿಯೇ ಬೀಡು ಬಿಟ್ಟಿದ್ದರು. ಇದೀಗ ಚಿತ್ರೀಕರಣ ಮುಗಿಸಿಕೊಂಡು ಚೆನ್ನೈಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ರಜನಿ ಸರಳತೆ ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ.