ದೇವನಹಳ್ಳಿ:- ಪಹಲ್ಗಾಮ್ ನಲ್ಲಿ ಹಿಂದುಗಳ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪ್ರಚೋದನೆ ಮಾತುಗಳನ್ನ ಕೇಳಿ ಕೇಳಿ ಸಾಕಾಗಿದೆ. ಬ್ರಿಟೀಷರು ಸ್ವತಂತ್ರ ನೀಡುವ ವೇಳೆ ಎರಡು ಕಂಟ್ರಿ ಫಾರ್ಮುಲ ಬಳಸಿ ದೇಶನ ಒಡೆದಿದ್ದಾರೆ. ಈಗ ಮತ್ತೊಮ್ಮೆ ಅವರ ಸಂತತಿ ಏನಿದರೆ ಅವರ ಕೇಂದ್ರದಲ್ಲಿ ಈಗ ಮತ್ತೊಮ್ಮೆ ದೇಶ ಒಡೆದು ಎರಡು ಭಾಗ ಮಾಡಲು ಹೋಗಿದ್ದಾರೆ. ಪಹಲ್ಗಾಮ್ ನಲ್ಲಿ ನಡೆದ ದಾಳಿಗೂ ಇಲ್ಲಿರುವ ಜನಗಳಿಗೆ ಏನು ಸಂಬಂಧ.
ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ಸಂಪೂರ್ಣ ವಿಫಲವಾಗಿದೆ. ಪಾಕಿಸ್ತಾನದ ಡಿಫೆನ್ಸ್ ಮಿನಿಸ್ಟರ್ ಹೇಳ್ತಾರೆ, ಭಾರತೀಯರು ಅಲ್ಲ, ಹಿಂದುಗಳೇ ನಮ್ಮ ವಿರೋಧಿಗಳು ಅಂತಾರೆ. ಸ್ಟೇಟ್ಮೆಂಟ್ ಕೊಟ್ಟ ಎರಡು ವಾರಗಳಲ್ಲಿ ಈ ದಾಳಿ ನಡೆದಿದೆ. ಜಾತಿ, ಧರ್ಮನ ಕೇಳಿ ಉಗ್ರರು ದಾಳಿ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಈಗ ಯುದ್ಧ ಬೇಕಾಗಿದೆ. ಈ ಹಿಂದೆ ನೋಡಿದರೆ ಕಾಶ್ಮೀರದಲ್ಲಿ ಪೊಲೀಸ್ ಮತ್ತು ಸೈನಿಕರನ್ನ ಹೊಡೆಯೋದನ್ನ ನೋಡಿದ್ದೇವೆ. ಅಮಾಯಕ ಸಾರ್ವಜನಿಕ ಮೇಲೆ ದಾಳಿ ನಡೆಸಿ ಸಾರ್ವಜನಿಕರನ್ನ ಕೆರಳಿಸುವ ಉದ್ದೇಶವಿದೆ. ಈ ಘಟನೆ ಕುರಿತು ಒಂದು ತಿಂಗಳ ಹಿಂದೆ ಕೇಂದ್ರಕ್ಕೆ ಮಾಹಿತಿ ಇರಬೇಕಿತ್ತು. ದೇಶದಲ್ಲಿ ಸಂಪೂರ್ಣ ಗುಪ್ತಚಾರ ಇಲಾಖೆ ವೈಫಲ್ಯವಾಗಿದೆ.ಇಂತಹ ಸಂದರ್ಭದಲ್ಲಿ ದೇಶ ಎಲ್ಲಾ ಜನತೆ ಒಗ್ಗಟ್ಟಾಗಿ ಇರಬೇಕು ಎಂದರು.