ದೇವನಹಳ್ಳಿ :- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ಸಿಂಧೂ ನದಿ ನೀರು ಬಿಡದಿದ್ರೆ ಯುದ್ಧಕ್ಕೆ ನಾವು ರೆಡಿ: ಪಾಕ್ ಗೃಹ ಸಚಿವ!
ದೇವಾಲಯದ ಆಡಳಿತ ಮಂಡಳಿ ಯಿಂದ ಇದೇ ತಿಂಗಳ 29 ಹಾಗೂ 30 ನೇ ತಾರೀಕಿನಂದು ನಡೆಯಲಿರುವ ದೇವಾಲಯದ12 ನೇ ವಾರ್ಷಿಕ ಮಹೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವಾರ್ಷಿಕ ಮಹೋತ್ಸವ ದಂದು ದೇವಾಲಯದಲ್ಲಿ ಗಂಗಾ ಪೂಜೆ, ಮಹಾ ಸಂಕಲ್ಪ, ಮಹಾಭಿಷೇಕ ನಡೆಯಲಿದೆ. ದೇವಾಲಯದ ಮಹೋತ್ಸವ ದಲ್ಲಿ ಚಿನ್ನಲೇಪಿತ ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆ ಆಯೋಜನೆ ಮಾಡಲಾಗಿದೆ. ಪ್ರಥಮ ಬಾರಿಗೆ ದೇವಾಲಯದಲ್ಲಿ ಭೂ ವ್ಯಾಜ್ಯಗಳ ನಿವಾರಣೆ ಹಾಗೂ ಲೋಕ ಕಲ್ಯಾಣಕ್ಕೆ ವಾರಾಹಿ ಹೋಮ ನಡೆಯಲಿದೆ.
ವಾರ್ಷಿಕ ಮಹೋತ್ಸವ ಕ್ಕೆ ಆಡಳಿತ ಮಂಡಳಿಯಿಂದ ದೇವಿಯ ಅನುಗ್ರಹ ಪಡೆಯುವಂತೆ ಭಕ್ತ ಗಣದಲ್ಲಿ ವಿಜ್ಞಾಪನೆ ಮಾಡಲಾಗಿದೆ. ಒಟ್ಟಾರೆ ಮಹೋತ್ಸವಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ.