ಭುವನೇಶ್ವರ : ಸಂಬಂಧಿಯಿಂದಲೇ 4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ವರದಿಯಾಗಿದೆ. ಒಡಿಶಾದ ಗಂಜಾಂನಲ್ಲಿ ಈ ಘಟನೆ ನಡೆದಿದ್ದು, ಸುಮಾರು 27 ವರ್ಷದ ವ್ಯಕ್ತಿ ತನ್ನ ಸಂಬಂಧಿಯ 4 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿ, ಕೊಲೆ ಮಾಡಿದ್ದಾನೆ.
ಶುಕ್ರವಾರ ಸಂಜೆ ಮಗು ಕಾಣೆಯಾಗಿದ್ದ ಬಗೆ ಮಗುವಿನ ಪೋಷಕರು ದೂರು ನೀಡಿದ್ದರು. ಶನಿವಾರ ನಿರ್ಮಾಣ ಹಂತದ ಮನೆಯಲ್ಲಿ ಅಪ್ರಾಪ್ತೆಯ ಮೃತದೇಹ ಪತ್ತೆಯಾಗಿತ್ತು ಸದ್ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ : NIA ಹೆಗಲಿಗೆ ತನಿಖೆ ಹೊಣೆ – ಕೇಂದ್ರ!
ಆರೋಪಿಯು ಬಾಲಕಿಗೆ ಚಾಕೊಲೇಟ್ ಆಮಿಷ ಒಡ್ಡಿ, ತಮ್ಮ ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಕರೆದೊಯ್ದಿದ್ದಾನೆ. ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆಯ ಕುತ್ತಿಗೆ ಹಿಸುಕಿ ಕೊಂದು, ನಂತರ ಶವವನ್ನು ಎಸೆದಿದ್ದ. ಈ ಕುಕೃತ್ಯ ಮಾಡುವ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.