ಚಿಕ್ಕಬಳ್ಳಾಪುರ:- ಬಿಜೆಪಿಯವರಿಗೆ ಅಧಿಕಾರ ಬಿಟ್ಟು ಏನು ಬೇಕಾಗಿಲ್ಲ. ಹಿಂದೂ-ಮುಸ್ಲಿಂ ಯಾರು ಬೇಕಿಲ್ಲ ಎಂದು ಸಚಿವ ಜಮೀರ್ ಕಿಡಿಕಾರಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ನವರು ಸಾಧನೆಗಳ ಮೂಲಕ ಮತಯಾಚನೆ ಮಾಡ್ತೀವಿ. ಬಿಜೆಪಿಯವರು ಎಂದಾದರೂ ಸಾಧನೆಗಳ ಮೂಲಕ ಮತ ಕೇಳಿದ್ದಾರಾ? ಆದ್ರೆ ಬಿಜೆಪಿಯವರು ಹಿಂದೂ ಮುಸ್ಲಿಂ ಅಂತ ಬೇಧಭಾವ ಮಾಡಿ ಮತ ಕೇಳ್ತಾರೆ. ಅವರಿಗೆ ಹಿಂದೂಗಳು ಬೇಕಿಲ್ಲ ಮುಸ್ಲಿಮರೂ ಬೇಕಿಲ್ಲ ಬೇಕಿರೋದು ಅಧಿಕಾರ ಮಾತ್ರ ಅಂತ ಕಿಡಿ ಕಾರಿದ್ದಾರ
ಹಿಂದೂ, ಮುಸ್ಲಿಂ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇಸ್ಲಾಂ ನಲ್ಲಿ ಜಾತಿ ಧರ್ಮ ಭೇದ ಭಾವ ಮಾಡಿ ಅಂತ ಹೇಳಿಲ್ಲ. ʻಸಾರೇ ಜಹಾನ್ಸೇ ಅಚ್ಚಾ ಹಿಂದೂಸ್ತಾನ್ ಹಮಾರಾʼ ಅಂತ ಇಸ್ಲಾಂ ಧರ್ಮ ಹೇಳಿಕೊಟ್ಟಿರೋದು ಅಂತ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.