ಕೋಲಾರ:- ಕೋಲಾರ ತಾಲೂಕಿನ ನರಸಾಪುರ ಬಳಿಯ ಬೆಳ್ಳೂರು ಬ್ರಿಡ್ಜ್ ಬಳಿ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡ ಘಟನೆ ಜರುಗಿದೆ.
ಮೂರು ಕಾರುಗಳ ನಡುವೆ ಈ ಅಪಘಾತ ಸಂಭವಿಸಿ ದುರಂತ ಸಂಭವಿಸಿದೆ. ಅಫ್ರೋಜ್ ಮೃತ ದುರ್ದೈವಿ. ಬೆಳ್ಳೂರು ಗೇಟ್ ಬಳಿಯ ಚೆನ್ನೈ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 76ರಲ್ಲಿ ಇಂಡಿಕಾ, ಫಾರ್ಚುನರ್ ಹಾಗೂ ಪೊಲೋ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.
ಈ ವೇಳೆ ಪೊಲೋ ಕಾರಿನಲ್ಲಿದ್ದ ಬೆಂಗಳೂರು ಆರ್.ಟಿ ನಗರದ ನಿವಾಸಿ ಅಫ್ರೂಜ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಅಫ್ರೂಜ್ ಮುಳಬಾಗಿಲಿನ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದರು. ಇನ್ನೂ ಘಟನೆಯಲ್ಲಿ ಗಾಯಗೊಂಡ ಐವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ