ಬೆಂಗಳೂರು:- ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಅದರಂತೆ ಕಸ ಬಿಸಾಡಬೇಡಿ ಎಂದಿದ್ದಕ್ಕೆ ನಡು ರಸ್ತೆಯಲ್ಲೇ ಕಾಲೇಜು ಪ್ರಾಧ್ಯಾಪಕನ ಮೇಲೆ ಯುವಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಏಪ್ರಿಲ್ 21 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಮಾರಸ್ವಾಮಿ ಲೇಔಟ್ನ ಜೆಹೆಚ್ ಬಿಸಿ ಲೇಔಟ್ನಲ್ಲಿ ಖಾಸಗಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋದಲ್ಲಿ ತೆರಳುತ್ತಿದ್ದ ಮೂವರು ಯುವಕರು, ತಿಂಡಿ ತಿಂದು ಕಸವನ್ನು ರಸ್ತೆ ಮೇಲೆಯೇ ಬಿಸಾಡಿದ್ದರು. ಆ ವೇಳೆ, ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಇದನ್ನು ಪ್ರಶ್ನಿಸಿದ್ದರು. ಕಸ ರಸ್ತೆ ಮೇಲೆ ಕಸ ಬಿಸಾಡಬೇಡಿ ಎಂದಿದ್ದರು. ಇದರಿಂದ ಕೋಪಗೊಂಡ ಯುವಕರು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು.
ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಕೆಎಸ್ ಲೇಔಟ್ ಪೊಲೀರು ಮೂವರು ಆರೋಪಿಗಳಾದ ಭಾನುಪ್ರಸಾದ್, ಶರತ್, ಅಮೃತ್ ಕುಮಾರ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ.