ಹುಬ್ಬಳ್ಳಿ: ಸೇವಂತಿಗೆ ಹೂವಿಗೆ ವಿವಿಧ ಕಡೆಗಳಲ್ಲಿ ಮಾರುಕಟ್ಟೆಯಲ್ಲಿ ಈ ಸೇವಂತಿಗೆ ವರ್ಷವಿಡೀ ಬೇಡಿಕೆ
ಸೇವಂತಿಗೆ ಈಗ ವಾಣಿಜ್ಯ ಬೆಳೆಯಾಗಿ ಧಾರವಾಡ ತಾಲೂಕಿನ ರೈತರಿಗೆ ಲಾಭದಾಯಕವಾಗಿ ಪರಿಣಮಿಸಿದೆ. ತಾಲೂಕಿನ ಕುರುಬಗಟ್ಟಿ ಲೋಕೂರು, ಮಂಗಳಗಟ್ಟಿ, ಕವಲಗೇರಿ, ಅಮ್ಮಿನಬಾವಿ, ಸೋಮಾಪುರ ಸೇರಿದಂತೆ ಕೃಷಿಯತ್ತ ಒಲವು ತೋರಿದ್ದಾರೆ. ಅಲ್ಪಾವಧಿಯ ಎಂದರೆ ಕೇವಲ ಎರಡು ತಿಂಗಳಿನ ಬೆಳೆಯಾಗಿರುವ ಕಾರಣ ರೈತರಿಗೆ ಇದು ಸುಲಭ,
ಮಾವಿನಹಣ್ಣನ್ನು ರಾತ್ರಿ ವೇಳೆ ತಿಂತೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!
ಅನುಕೂಲಕರ ಬೆಳೆಯಾಗಿ ಮಾರ್ಪಟ್ಟಿದೆ. ಕಡಿಮೆ ಖರ್ಚಿನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ಕೆಲವು ರೈತರು ಕಾಯಿಪಲ್ಲೆ ಜತೆಗೆ ಸೇವಂತಿಗೆ ಕೃಷಿ ಕೈಗೊಂಡು ಲಾಭಗಳಿಸುತ್ತಿದ್ದಾರೆ. ಇನ್ನು ಕೆಲವರು ಪ್ರಮುಖ ಬೆಳೆಯನ್ನು ಬೆಳೆದು, ಇನ್ನೊಂದು ಪ್ರಮುಖ ಬೆಳೆಯನ್ನು ಬೆಳೆಯುವ ನಡುವಿನ ಅವಧಿಯಲ್ಲೂ ಸೇವಂತಿಗೆ ಬೆಳೆಯುತ್ತಾರೆ.
ಸೇವಂತಿಗೆ ಕೃಷಿಗಾಗಿ ಭೂಮಿ ಹದ
ಧಾರವಾಡ -ಸವದತ್ತಿ ರಸ್ತೆಯ ಅಮ್ಮಿನಬಾವಿ ರೈತರ ಭೂಮಿಯಲ್ಲಿ ಕಂಡು ಬಂದಿದೆ.ಈಗ ಜಮೀನಿನಲ್ಲಿಯ ಕಸವನ್ನು ಸಂಪೂರ್ಣವಾಗಿ ತೆಗೆದು ಮಣ್ಣು ಹದ ಮಾಡಿ, 3 ಆಡಿ ಅಂತರದಲ್ಲಿ ಸಾಲುಗಳನ್ನು ಈ ಬಿಟ್ಟು ಹೂವಿನ ಸಸಿ ಪಾಲನೆ ಪೋಷಣೆ ಮಾಡಿ ನಂತರ ಸಾಲುಗಳಲ್ಲಿ ನಾಟಿ ಮಾಡುತ್ತಾರೆ.
ಈ ಪ್ರಕ್ರಿಯೆಯನ್ನು ಹ ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ ಇರುತ್ತದೆ. ಹೆ ಮಕ್ಕಳಂತೆ ಪಾಲನೆ ಪೋಷಣೆ ಮಾಡಿದ ಹೂವುಗಳನ್ನು ಕತ್ತರಿಸಿ ರೈತರು ಮಾರುಕಟ್ಟೆಗೆ ಒಯ್ಯುತ್ತಾರೆ. ನೀರಾವರಿ ಸೌಲಭ್ಯ ಇರುವವರು ಹಾಗೂ ಇರದವರು ಎಲ್ಲ ರೈತರೂ ಈ ಸೇವಂತಿಗೆ ಪುಷ್ಪಕೃಷಿ ಮಾಡುತ್ತಿದ್ದಾರೆ.
ಧಾರವಾಡ ಭಾಗದಲ್ಲಿ ಹೆಚ್ಚಾಗಿ ಪೂರ್ಣಿಮಾ ಎನ್ನುವ ಹಳದಿ ಹಾಗೂ ಬಿಳಿ ಬಣ್ಣದ ಸೇವಂತಿಗೆ, ರಾಣಿ ಎನ್ನುವ ಹಳದಿ ಹಾಗೂ ಬಿಳಿ ಬಣ್ಣದ ತಳಿಗಳನ್ನು ಬೆಳೆಯುತ್ತಾರೆ.
ಬೇಡಿಕೆ ನಿರಂತರ: ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವಿಗೆ
ಬೇಡಿಕೆಯಂತೂ ವರ್ಷವಿಡೀ ಇದ್ದೇ ಇರುತ್ತದೆ. ಮುಖ್ಯವಾಗಿ ಕಾರ್ಯಕ್ರಮ, ಅಲಂಕಾರ, ಹಬ್ಬ, ಧಾರ್ಮಿಕ ಪೂಜಾ ವಿಧಿಗಳು ಮತ್ತು ಹೂಮಾಲೆ ತಯಾರಿಕೆಗೆ ಸೇವಂತಿಗೆ ಬೇಕೇ ಬೇಕು. ಹೀಗಾಗಿ ಉತ್ತಮ ಬೇಡಿಕೆ ಇರುವ ಹಿನ್ನೆಲೆಯಲ್ಲಿ ವರ್ಷವಿಡೀ ಹೂವಿನ ಕೃಷಿಯಲ್ಲೇ ತೊಡಗಿರುವ ರೈತರೂ ಧಾರವಾಡ ತಾಲೂಕಿನಲ್ಲಿ ಕಂಡು ಬರುತ್ತಾರೆ.
ಸೇವಂತಿಗೆ ಕೃಷಿಯಲ್ಲಿ ಅಧಿಕ ಲಾಭ ಗಳಿಸಲು ಹೂವಿನ ಗುಣಮಟ್ಟ ಬಣ್ಣ, ಹೊಳಪು ಅತಿಮುಖ್ಯ. ಹೂವು ಹೆಚ್ಚು ದಿನ ಬಾಳಿಕೆ ಬರುವಂತಿದ್ದರೆ, ಖರೀದಿಸುವವರ ಸಂಖ್ಯೆಯೂ ಹೆಚ್ಚುತ್ತದೆ. ಹೀಗಾಗಿ ರೈತರಿಗೆ ಕೃಷಿ ವೇಳೆ, ಸಾಗಣೆ ವೇಳೆ ಜಾಗರೂಕತೆ ಅವಶ್ಯ ಆಗಿದೆ