ಕೋಲಾರ : ಬೆಟ್ಟಿಂಗ್ ಕಟ್ಟಿ ಸಿಕಾಪಟ್ಟೆ ವಿಸ್ಕಿ ಕುಡಿದ ಯುವಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕಾರ್ತಿಕ್ (21) ಎಂದು ಗುರುತಿಸಲಾಗಿದೆ. ಕಾರ್ತಿಕ್ ಗ್ರಾಮದ ವೆಂಕಟರೆಡ್ಡಿ ಎಂಬುವನೊಂದಿಗೆ 5 ಬಾಟಲ್ ಓಸಿ ವಿಸ್ಕ್ ಕುಡಿಯಲು ಹತ್ತು ಸಾವಿರ ಬೆಟ್ಟಿಂಗ್ ಕಟ್ಟಿದ್ದಾನೆ. ಇದೇ ಬೆಟ್ಟಿಂಗ್ ಗೋಸ್ಕರ ಕುಡಿಯುವ ವೇಳೆ ಕಾರ್ತಿಕ್ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಅಕ್ರಮ ಗೋವು ಸಾಗಾಣಿಕೆ: ಮುತಾಲಿಕ್ ನೇತೃತ್ವದಲ್ಲಿ ದಾಳಿ, ಪೊಲೀಸರ ವಶಕ್ಕೆ
ಕಾರ್ತಿಕ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ 9 ದಿನಗಳ ಹಿಂದೆಯಷ್ಟೇ ಒಂದು ಮಗು ಕೂಡ ಆಗಿತ್ತು. ಈ ಸಂಬಂಧ ನಂಗಲಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಜಿ ಕಟ್ಟಿದ್ದ ವೆಂಕಟರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ಮಂದಿ ವಿರುದ್ದ ದೂರು ದಾಖಲಾಖಿಸಲಾಗಿದೆ. ಪೊಲೀಸರು ವೆಂಕಟರೆಡ್ಡಿ ಮತ್ತು ಸುಬ್ರಮಣಿ ಬಂಧಿಸಿದ್ದು, ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.