ತುಮಕೂರು : ತುಮಕೂರಿನ ಜಯಪುರ ಬಯಲು ಪ್ರದೇಶದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೇರೆಡೆ ವ್ಯಕ್ತಿಯ ಕೊಲೆ ಮಾಡಿ, ಇಲ್ಲಿ ತಂದು ಬಿಸಾಡಿದ್ದಾರೆ ಎನ್ನಲಾಗಿದೆ.
ಮೃತ ವ್ಯಕ್ತಿಯನ್ನು ಸೋಲೂರು ಮೂಲದ ದಿಲೀಪ್ ಎಂದು ಗುರುತಿಸಲಾಗಿದೆ. ದಿಲೀಪ್ ವಿವಾಹಿತ ಮಹಿಳೆ ಅಮೃತ ಎಂಬಾಕೆಯನ್ನು ಪ್ರೀತಿಸಿ ಓಡಿ ಹೋಗಿದ್ದ ಎನ್ನಲಾಗಿದೆ. ಭಾನುವಾರ ದಿಲೀಪ್ನ ಹತೈಗೈದು ತುಮಕೂರಿನ ಜಯಪುರ ಬಳಿ ಶವ ಎಸೆದು ಆರೋಪಿಗಳು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ..
ನಾಲ್ವರು ಪಾಕ್ ಪ್ರಜೆಗಳ ಗಡಿಪಾರು ; ದೀರ್ಘಾವಧಿ ವೀಸಾ ಹೊಂದಿರುವವರಿಗೆ ವಿನಾಯ್ತಿ
ಸದ್ಯ ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಶವಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನೆಲಮಂಗಲ ಬಳಿ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರೆಸಿದ್ದಾರೆ.