ಬಾಗಲಕೋಟೆ : ಬಸವ ಜಯಂತಿ ಅಂಗವಾಗಿ ಏ.29ಮತ್ತು 30ರಂದು ಕೂಡಲಸಂಗಮದಲ್ಲಿ ಜರುಗುವ ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆಗೆ ಭಾನುವಾರ ಮುಂಜಾನೆ ರಬಕವಿ ಪಟ್ಟಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
Gold Silver Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಬಂಗಾರ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದ ಬಸ್ ನಿಲ್ದಾನದ ಹತ್ತಿರ ಸ್ವಾಗತ ಕಾರ್ಯಕ್ರಮ ನಡೆಯಿತು. ಈ ವೇಳೆ ಶ್ರೀ ಮ. ನಿ. ಪ್ರ. ಸಿದ್ದರಾಮ್ ಮಹಾಸ್ವಾಮಿಗಳು ವಿರಕ್ತಮಠ ರಬಕವಿ- ಮರೆಗುದ್ದಿ.ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ, ಚಿದಾನಂದ ಸೊಲ್ಲಾಪುರ, ರಾಮಣ್ಣ ಹುಲಕುಂದ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಮ. ಕೃ. ಮೇಗಾಡಿ, ಗಿರೀಶ ಮುತ್ತೂರ, ಬಸವರಾಜ ತೆಗ್ಗಿ, ಮಲ್ಲಿಕಾರ್ಜುನ ಗಡೆನ್ನವರ, ಡಿ. ಬಿ. ಜಾಯಗೋಂಡ, ಡಾ. ರವಿ ಜಮಖಂಡಿ, ಸಂಜಯ ತೇಲಿ, ವಿಜಯಕುಮಾರ ಹಲಕುರ್ಕಿ, ಯಲ್ಲಪ್ಪ ಕಟಗಿ, ಪರಶುರಾಮ ಕಾಖಂಡಕಿ, ಡಾ. ಜಿ. ಎಚ್. ಚಿತ್ತರಗಿ, ಸೋಮಶೇಖರ ಕೊಟ್ಟರಶೆಟ್ಟಿ, ಬಸವರಾಜ ಗುಂಡಿ, ಮೃತ್ಯುಂಜಯ ರಾಮದುರ್ಗ, ಮಹಾದೇವ ಕೋಟ್ಯಾಳ, ಮಹಾದೇವ ದುಪದಾಳ, ನಗರ ಸಭೆ ಅಧ್ಯಕ್ಷರು ವಿದ್ಯಾ ಧಬಾಡಿ, ಉಪಾಧ್ಯಕ್ಷರು ದೀಪಾ ಗಾಡಿವಡ್ಡರ, ಮಹಾದೇವ ಕುಚನೊರ.ಈರಣ ಗುಣಕಿ ಸೇರಿದಂತೆ ಶಿಕ್ಷಕರು, ಬಸವಾಭಿಮಾನಿಗಳು ಬಸವಾದಿ ಶರಣರ ವೈಭವದ ರಥಯಾತ್ರೆಯಲ್ಲಿ ಭಾಗವಹಿಸಿದ್ದರು.