ಶಿವಮೊಗ್ಗ: ಪ್ರಧಾನಿಯರಲ್ಲಿ ಬೇಡಿಕೊಳ್ಳುವುದೇನೆಂದರೆ ನಮಗೆ ಸಾಂತ್ವನ ಬೇಕಾಗಿಲ್ಲ ಪ್ರತೀಕಾರ ಬೇಕಾಗಿದೆ ಎಂದು ಹಿಂದೂ ಪರ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಿನ್ನೆ ನಾನು ಮೃತ ಮಂಜುನಾಥ್ ಅವರ ಮನೆಗೆ ಭೇಟಿ ನೀಡಿದ್ದೆ. ಅವರ ತಾಯಿ, ಮಗ ಹಾಗೂ ಹೆಂಡತಿಯ ಧೈರ್ಯವನ್ನು ನೋಡಿದರೆ ಹೆಮ್ಮೆಯಾಗುತ್ತದೆ.
ಮಾವಿನಹಣ್ಣನ್ನು ರಾತ್ರಿ ವೇಳೆ ತಿಂತೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!
ಅವರಿಗೆ ನಾವು ಸಾಂತ್ವನ ಮಾತ್ರ ಕೊಡಲು ಸಾಧ್ಯ. ಪ್ರಧಾನಿಯರಲ್ಲಿ ಬೇಡಿಕೊಳ್ಳುವುದೇನೆಂದರೆ ನಮಗೆ ಸಾಂತ್ವನ ಬೇಕಾಗಿಲ್ಲ ಪ್ರತೀಕಾರ ಬೇಕಾಗಿದೆ. ಪ್ರತಿಕಾರ ಒಂದೇ ಈ ಲಾಜಿಕಲ್ ಎಂಡ್ ಮಾಡಲು ಸಾಧ್ಯವಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಸಚಿವ ತಿಮ್ಮಾಪುರ ವಿವಾದತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಅವರ ಹೇಳಿಕೆಯನ್ನ ವಿವಾದಾತ್ಮಕ ಹೇಳಿಕೆ ಎಂದು ಕರೆಯುವುದೇ ತಪ್ಪು, ಅದು ಒಂದು ದೇಶ ದ್ರೋಹ. ತಿಮ್ಮಾಪುರ ಅವರು ಈ ದೇಶದ ದಾರಿಯನ್ನ ತಪ್ಪಿಸುವುದಕ್ಕೆ ನೋಡುತ್ತಿದ್ದಾರೆ. ಅವರು ದೇಶದ್ರೋಹದ ಜೊತೆಗೆ ಮಾನವೀಯತೆಗೆ ವಿರುದ್ಧ ಇದ್ದಾರೆ ಅದಕ್ಕೆ ಧಿಕ್ಕಾರವಿರಲಿ ಎಂದರು.