Close Menu
Ain Live News
    Facebook X (Twitter) Instagram YouTube
    Friday, May 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಬಸವ ಜಯಂತಿ ಆಚರಣೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ಅಗತ್ಯವಿದೆ- ಬಸವರಾಜ ಹೊರಟ್ಟಿ!

    By AIN AuthorApril 29, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ದೇಶ ವಿದೇಶಗಳಲ್ಲಿ ಶ್ರೀ ಬಸವೇಶ್ವರ ಜಯಂತಿಯನ್ನ ಭಾರೀ ಅದ್ದೂರಿಯಾಗಿ ಆಚರಣೆ ಮಾಡಲಾಗುತಿದ್ದು ನಮ್ಮ ರಾಜ್ಯದಲ್ಲಿ ಬಸವ ಜಯಂತಿ ಆಚರಣೆಗೆ ಸಾರ್ವಜನಿಕರು ಹಾಗೂ ಭಕ್ತರು ಬರಲು ಹಿಂದೇಟು ಮಾಡುತಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು. ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ನಗರದ ಮೂರುಸಾವಿರ ಮಠದ ಆವರಣದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಸಮಾರಂಭದ ಮುಖ್ಯ ಅತಿಯಾಗಿ ಆಗಮಿಸಿ ಅವರು ಮಾತನಾಡಿದರು.

    ಪೊಲೀಸ್ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಸಿಯುತ್ತದೆ; ಶಾಸಕ ಮಹೇಶ ಟೆಂಗಿನಕಾಯಿ!

    ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಮಾತನಾಡಿ, ನಾಡಿನ ಮಠಗಳಲ್ಲಿ ಒಂದಾದ ಮೂರು ಸಾವಿರ ಮಠದಲ್ಲಿ ಬಸವೇಶ್ವರ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಬಸವೇಶ್ವರರ ಅನುಯಾಯಿಗಳು ಭಾಗವಹಿಸಬೇಕು ಎಂದರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಮಾತನಾಡಿ, ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದು ಇಂತಹ ಕಾರ್ಯಕ್ರಮಗಳು ನಾಡಿನ ಜನತೆಗೆ ಶ್ರೀ ಬಸವೇಶ್ವರರ ಕಾಲಾವಧಿ ಶರಣರ ತತ್ವ ವಚನಗಳು ಇನ್ನಷ್ಟು ತಿಳಿಯವಂತಹ ಆಗಬೇಕು ಎಂದರು.

    ಮಹಿಳೆಯರಿಂದ ಮತ್ತು ಮಕ್ಕಳಿಂದ ಶ್ರೀ ಬಸವಣ್ಣನವರ ವಚನಗಳ ಗಾಯನ ಸ್ಪರ್ಧೆ, ಕುಮಾರಿ. ದಿಯಾ ಆವಾರಿ ಅವರಿಂದ ಭರತ ನಾಟ್ಯ ಜೊತೆಗೆ ವಿದ್ವಾನ ಸುಜಯ ಶಾನಭಾಗ ಮತ್ತು ಕಲಾ ಸುಜಯ ತಂಡಗಳಿಂದ ವಚನಾಧಾರಿತ ನೃತ್ಯರೂಪಕಗಳು, ಸಂಗೀತ ಸಂಜೆ ಪ್ರಕಾಶ ಜಾಡರ ಅವರ ಹಾಸ್ಯ ಕಾರ್ಯಕ್ರಮಗಳು ಜನಮನ ಸೆಳೆದವು. ಸಾಮಾಜಿಕ ಕಾರ್ಯಕರ್ತ ರಮೇಶ್ ಮಹಾದೇವಪ್ಪನವರ, ಲಿಖಗಾ ಸಮಾಜದ ಮುಖಂಡ ಶರಣಪ್ಪ ಕೊಟಗಿ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ ಮುಂತಾದವರು ಆಗಮಿಸಿ ಸನ್ಮಾನ ಸ್ವೀಕರಿಸಿದರು. ಅಧ್ಯಕ್ಷತೆಯನ್ನು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ವಹಿಸಿ ಆರ್ಶೀವಚನ‌ ಮಾಡಿದರು ಕುಂದಗೋಳದ ಬಸವಣ್ಣಜ್ಜನವರು ಹಾಗೂ ಶರಣೆ ವಿಜಯಲಕ್ಷ್ಮಿ ಅವರು
    ಶ್ರೀ ಬಸವೇಶ್ವರ ಮಹತ್ವ ತಿಳಿಸಿಕೊಟ್ಟರು.‌ಪ್ರವೀಣ ಕುಬಸದ, ರತ್ನಾ ಗಂಗಣ್ಣವರ, ಅಶೋಕ ಮೀಶೆ, ಚನ್ನಬಸಪ್ಪ ಧಾರವಾಡಶೆಟ್ಟರ, ಈರಪ್ಪ ಎಮ್ಮಿ ಇತರರಿದ್ದರು.

    Post Views: 5

    Demo
    Share. Facebook Twitter LinkedIn Email WhatsApp

    Related Posts

    ಸಿಎಂ ತವರು ಜಿಲ್ಲೆಯಲ್ಲಿ ಅಂಬೇಡ್ಕರ್ ಗೆ ಇದೆಂಥಾ ಅವಮಾನ: ಸಂವಿಧಾನ ಶಿಲ್ಪಿಗೆ ಮಣ್ಣು ಬಳಿದ ಕಿಡಿಗೇಡಿಗಳು!

    May 15, 2025

    ಕುಡಿಯುವ ನೀರಿಗೆ ಹಾಹಾಕಾರ: ಹುಬ್ಬಳ್ಳಿಯಲ್ಲಿ ಖಾಲಿ ಕೊಡ ಹಿಡಿದು ನಾರಿಯರ ಪ್ರತಿಭಟನೆ

    May 15, 2025

    ಸಾರ್ವಜನಿಕರಿಗೆ ತೊಂದ್ರೆ ಕೊಡ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    May 15, 2025

    ಕ್ರಿಕೆಟ್ ವಿಚಾರವಾಗಿ ಜಗಳ: ಬಾಟಲ್ ನಿಂದ ಶಿಕ್ಷಕನಿಗೆ ಇರಿದ ಯುವಕ ಅಂದರ್: CCTV VIDEO

    May 15, 2025

    ಸೋಫಿಯಾ ಖುರೇಷಿ ಪತಿ ಮನೆ ಮೇಲೆ RSS ದಾಳಿ: ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿ ವಿರುದ್ಧ FIR ದಾಖಲು

    May 15, 2025

    ಕೋಲಾರ: ಮಹಿಳೆಯರಿಗೆ ಮಡಿಲು ತುಂಬಿದ ಧೀರ್ಘ ಸುಮಂಗಲಿ ಭವ

    May 15, 2025

    ಜನಿವಾರ ವಿವಾದ: ಗದಗ್‌ ನಲ್ಲಿ 25 ಸಮಾಜಗಳ ಒಕ್ಕೂಟದಿಂದ ಪ್ರತಿಭಟನೆ

    May 15, 2025

    Lucky Baskhar ಸಿನಿಮಾ ಸ್ಟೈಲ್ʼನಲ್ಲಿ ಬ್ಯಾಂಕ್ ಲೂಟಿ: ಚಿನ್ನಾಭರಣ ಕದ್ದು ಗೋವಾದಲ್ಲಿ ಮಜಾ ಮಾಡ್ತಿದ್ದ ಬ್ಯಾಂಕ್ ನೌಕರ ಅಂದರ್..!

    May 15, 2025

    ಹುಧಾ ಮಹಾನಗರ ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷೆಯಾಗಿ ಜುಬೇದಾ ನಧಾಪ್ ನೇಮಕ

    May 15, 2025

    ಮಗಳು-ಅಳಿಯ ಕಳ್ಳ-ಕಳ್ಳಿ ಎಂದ ಅಪ್ಪ..ತಂದೆ ಆರೋಪಕ್ಕೆ ಕ್ವಾಟರ್‌ ಕಥೆ ಹೇಳಿದ ಚೈತ್ರಾ ಕುಂದಾಪುರ

    May 15, 2025

    ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳು ಅರೆಸ್ಟ್.!

    May 15, 2025

    ಚೈತ್ರಾ ಕುಂದಾಪುರ ಕಳ್ಳಿ, ಅವಳ ಗಂಡ ಕೂಡ ಕಳ್ಳ..ತಂದೆಯ ಸ್ಫೋಟಕ video ವೈರಲ್!

    May 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.