ಬೆಂಗಳೂರು ಗ್ರಾಮಾಂತರ : ಹೊಸಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೂರು ವರ್ಷಗಳ ಹಿಂದೆ ಬ್ಯಾಂಕ್ ಗೆ ಕನ್ನ ಹಾಕಿದ್ದ ಖದೀಮರ ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ನಾಲ್ವರು ಆರೋಪಿಗಳ ಬಂಧಿಸಿದ್ದು, ಸರ್ತಾಜ್, ಕಾಳಿ ಚರಣ್, ಗುಡ್ಡು ಅಲಿಯಾಸ್ ಕಳಿಯಾ, ಮತ್ತು ಅಸ್ಲಾಂ ಟನ್ ಟನ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಕಳೆದ 2022 ರಲ್ಲಿ ಬ್ಯಾಂಕ್ ಶೆಟರ್ ಮುರಿದು, ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕದ್ದು ಪರಾರಿಯಾಗಿದ್ದಾರೆ. ಟ್ರಕ್ ನಲ್ಲಿ ಬೆಂಗಳೂರಿಗೆ ಬಾಡಿಗೆಗೆ ಬಂದಿದ್ದು ವಾಪಸ್ ಹೋಗುವ ವೇಳೆ ಬ್ಯಾಂಕ್‌ನಲ್ಲಿ ಕಳ್ಳತನ ಮಾಡಿದ್ದರು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಟ್ರಕ್ ವಶಕ್ಕೆ ಪಡೆಯಲಾಗಿದೆ.
ಹಿಂದೂಗಳು ಮತ್ತು ದೇಶ ವಿರೋಧಿ ಪೋಸ್ಟ್ ಹಾಕಿದ್ದ ವೈದ್ಯೆ ಕೆಲಸದಿಂದ ವಜಾ
ಇನ್ನೂ ರಾಜ್ಯ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆ ಇದೇ ರೀತಿ ಕೃತ್ಯಗಳನ್ನ ಮಾಡಿದ್ದು, ಸದ್ಯ ಪೊಲೀಸರು ಬಂಧಿತ ಆರೋಪಿಗಳ ಜೊತೆ ಚಿನ್ನಾಭರಣ ರಿಕವರಿಗೆ ಉತ್ತರಪ್ರದೇಶಕ್ಕೆ ತೆರಳಿದ್ದಾರೆ.