ಬೆಂಗಳೂರು: ಭಾರತೀಯ ಯೋಧರಲ್ಲಿ ಸ್ಥೈರ್ಯ ತುಂಬಲು ಶ್ರೀರಾಮಸೇನೆಯಿಂದ ಪರಶುರಾಮ ಜಯಂತಿ ಮಾಡಲಾಗುವುದು ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮಡಿದರಿಗೆ ಸಂತಾಪ ಸೂಚಿಸಲು ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಉಗ್ರರಿಗೆ, ಅವರ ಪೋಷಕರಿಗೆ ತಕ್ಕ ಉತ್ತರ ನೀಡಲು ಹಾಗೂ ನಮ್ಮ ದೇಶದ ಯೋಧರಲ್ಲಿ ಧೈರ್ಯ ಮತ್ತು ಸ್ಥೈರ್ಯ ತುಂಬಲು ಪರಶುರಾಮ್ ಜಯಂತಿ ಆಚರಿಸಲಾಗುತ್ತಿದೆ, ಸಮಾಜಕ್ಕೂ ಧೈರ್ಯ ತುಂಬಲು ಹೋಮ ಯಜ್ಞಗಳನ್ನು ನೆರವೇರಿಸಲಾಗುತ್ತಿದೆ ಎಂದರು.
ಬಿಳಿ ಕೂದಲನ್ನು ಬೇರುಗಳಿಂದ ಕಪ್ಪಾಗಿಸುತ್ತೆ ಈ ಹೇರ್ ಪ್ಯಾಕ್! ಮೊಣಕಾಲುದ್ದ ಕೂದಲು ಗ್ಯಾರಂಟಿ!
ಇನ್ನೂ ಹಿಂದೂ ಧರ್ಮದ ಬಲವರ್ಧನೆ ಮತ್ತು ಭಾರತದಲ್ಲಿದ್ದುಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗುವವರು ನಿರ್ನಾಮವಾಗಬೇಕು ಎಂಬ ಉದ್ದೇಶವೂ ಪರಶುರಾಮ್ ಜಯಂತಿ ಆಚರಣೆಯ ಭಾಗವಾಗಿದೆ ಎಂದು ಮುತಾಲಿಕ್ ಹೇಳಿದರು.