ರಾಯಚೂರು/ಬೆಳಗಾವಿ : ಕಾಶ್ಮೀರದಲ್ಲಿನ ಉಗ್ರ ಕೃತ್ಯ ಖಂಡಿಸಿ ರಾಯಚೂರಿನಲ್ಲಿ ಹಿಂದೂ ಹಿತ ರಕ್ಷಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ನಡೆಸಲಾಯಿತು.
ರಾಯಚೂರು ನಗರದ ನೇತಾಜಿ ವೃತ್ತದಿಂದ ಚಂದ್ರಮೌಳೇಶ್ವರ ಸರ್ಕಲ್ ವರೆಗೆ ಜಾಥಾ ನಡೆಸಿದ್ದು, ಕ್ಯಾಂಡಲ್, ಮೊಬೈಲ್ ಟಾರ್ಚ್ ಹಿಡಿದು ಉಗ್ರರ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಇನ್ನೂ ಪಂಜಿನ ಮೆರವಣಿಗೆ ಮಾಡೋ ಮೂಲಕ ಉಗ್ರ ಕೃತ್ಯ ಖಂಡಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ನಗರ ಶಾಸಕ ಶಿವರಾಜ್ ಪಾಟೀಲ್, ಮಠಾಧೀಶರು, ಹಿಂದು ಸಂಘಟನೆ ಕಾರ್ಯಕರ್ತರು,ಮಹಿಳೆಯರು, ಸಾರ್ವಜನಿಕರು ಭಾಗಿಯಾಗಿದ್ದು, ಇಸ್ಲಾಂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧವೂ ಪ್ರತಿಭಟನೆ
ಇನ್ನೊಂದೆಡೆ ಪಾಕಿಸ್ತಾನದ ವಿರುದ್ಧ ಯುದ್ದ ಅಗತ್ಯವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ, ಬೆಳಗಾವಿ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಮೇಲೆ ಕೈಎತ್ತಿದ್ದನ್ನ ಖಂಡಿಸಿ ಸಿಎಂ ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಆಕ್ರೋಶ ಭ್ರಷ್ಟ ಸಿಎಂ, ದೇಶದ್ರೋಹಿಸಿ ಸಿಎಂ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.