ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ನಾಗಾ ಸಾಧು ಸೋಗಿನಲ್ಲಿ ಕಾರು ಚಾಲಕನೊಬ್ಬನಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರು ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಗ್ರಿಲಾ ಹೋಟೆಲ್ ಬಳಿ ನಡೆದಿದೆ. ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಎಂಬುವವರಿಗೆ ವಂಚನೆ ಮಾಡಲಾಗಿದ್ದು, ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರ ತೆಗೆದುಕೊಂಡು ಪರಾರಿಯಾಗಿದ್ದಾನೆ. ಏ.19ರಂದು ಖಾಸಗಿ ಹೋಟೆಲ್ ಬಳಿ ಮಾಲೀಕರನ್ನ ಡ್ರಾಪ್ ಮಾಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು.
ಬಿಳಿ ಕೂದಲನ್ನು ಬೇರುಗಳಿಂದ ಕಪ್ಪಾಗಿಸುತ್ತೆ ಈ ಹೇರ್ ಪ್ಯಾಕ್! ಮೊಣಕಾಲುದ್ದ ಕೂದಲು ಗ್ಯಾರಂಟಿ!
ಈ ವೇಳೆ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ. ಚಾಲಕನಿಗೆ 5 ರುದ್ರಾಕ್ಷಿ ಕೊಟ್ಟು ಒಂದು ವಾಪಸ್ಸು ಕೂಡುವಂತೆ ಹೇಳಿದ್ದ. ವಾಪಸ್ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ನಲ್ಲಿ ಮಡಚಿ ಓಪನ್ ಮಾಡಿದ್ದ.
ಈ ವೇಳೆ ರುದ್ರಾಕ್ಷಿ ಹೂ ಆಗಿ ಬದಲಾಗಿತ್ತು. ನೋಡು ಇದು ಶುಭ ಸೂಚಕ ನಿನಗೆ ಒಳ್ಳೆಯದಾಗುತ್ತೆ ಲಕ್ಷ್ಮಿ ಕೃಪಾಕಟಾಕ್ಷವಾಗುತ್ತೆ ಅಂತ ರೈಲುಬಿಟ್ಟಿದ್ದಾನೆ. ನಂತ್ರ ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು ಅಂತ ಹೇಳಿದ್ದಾನೆ. ಚಿನ್ನದ ಉಂಗುರ ಬಿಚ್ಚಿ ಕೊಡುತ್ತಿದ್ದಂತೆ ಹಣೆಗೆ ಬೂದಿ ರೀತಿಯ ವಸ್ತುವನ್ನು ಹಚ್ಚಿದ್ದಾನೆ. ಹಿಂದೆ ತಿರುಗಿ ನೋಡದೇ ಸ್ವಲ್ಪ ಮುಂದೆ ಹೋಗು ಇಲ್ಲದಿದ್ರೆ ನಿನಗೆ ಕೆಡುಕಾಗುತ್ತದೆ ಅಂತ ಹೇಳಿದ್ದಾನೆ.
ಆತನ ಮಾತು ಕೇಳಿ ಮಂಕುಬಡಿದಂತಾದ ವೆಂಕಟಕೃಷ್ಣಯ್ಯ ಮುಂದೆ ಬಂದಿದ್ದಾನೆ. ಬಳಿಕ ನಕಲಿ ನಾಗಸಾಧು ಅಲ್ಲಿಂದ ಮಾಯವಾಗಿದ್ದಾನೆ. ಬಳಿಕ ಮನೆಯವರಿಗೆ ವಿಚಾರ ತಿಳಿಸಿದ ವೆಂಕಟಕೃಷ್ಣಯ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ನಾಗಸಾಧುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.