ಚಿತ್ರದುರ್ಗ : ಕಾನೂನು ಕಾಲೇಜಿನ ಉಪನ್ಯಾಸಕಿಯೊಬ್ಬರು ಪಾಕಿಸ್ತಾನದ ಪರ ಮಾತನಾಡಿದ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ಎಸ್ ಜೆ ಎಂ ಕಾನೂನು ಕಾಲೇಜಿನ ಉಪನ್ಯಾಸಕಿ ಅಂಬಿಕಾ ಮೇಲೆ ಈ ಒಂದು ಗಂಭೀರ ಆರೋಪ ಕೇಳಿ ಬಂದಿದೆ.
ಮಂಗಳವಾರ ಬೆಳಗ್ಗೆ 11.30 ಕ್ಕೆ ಈ ಬಗ್ಗೆ ಎಬಿವಿಪಿ ವತಿಯಿಂದ ಕಾಲೇಜು ಮುಂಬಾಗ ಪ್ರತಿಭಟನೆ ನಡೆಸಿ ಉಪನ್ಯಾಸಕಿ ಅಮಾನತ್ತಿಗೆ ಆಗ್ರಹಿಸಿದ್ದಾರೆ. ಇನ್ನೂ ಪ್ರಬಲವಾದ ಭಾರತ ದೇಶದ ಅಕ್ಕಪಕ್ಕ ಇರುವಂತಹ ನೆರೆಹೊರೆ ಸಣ್ಣ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪಘಾನಿಸ್ಥಾನ ಭಾರತದ ರಾಜಕೀಯ ಪಕ್ಷಗಳ ತಿಕ್ಕಾಟಕ್ಕೆ ಬಲಿಪಶು ಆಗುತ್ತಿವೆ ಎಂದು ಪಾಕಿಸ್ತಾನವನ್ನು ಓಲೈಸಿ ದೇಶ ವಿರೋಧ ಪ್ರಚೋದನೆಗಳನ್ನು ತರಗತಿಯ ವೇಳೆ ವಿದ್ಯಾರ್ಥಿಗಳ ಮುಂದೆ ಉಪನ್ಯಾಸಕಿ ಮಾತನಾಡಿದ್ದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಮತ್ತೆ ಮುಂದಕ್ಕೆ ಹೋಯ್ತು ಜಾತಿಗಣತಿ: ಏ.17ರಂದು ವಿಶೇಷ ಸಂಪುಟ ಸಭೆಗೆ ನಿರ್ಧಾರ
ಕಾಲೇಜು ಆಡಳಿತ ಮಂಡಳಿ ಆ ಉಪನ್ಯಾಸಕಿಯನ್ನು ಅಮಾನತ್ತು ಮಾಡಬೇಕು. ಮತ್ತು ಆ ಉಪನ್ಯಾಸಕಿ ಬಹಿರಂಗವಾಗಿ ವಿದ್ಯಾರ್ಥಿಗಳ ಮುಂದೆ ಕ್ಷಮೆ ಕೇಳಬೇಕು ಎಂದು ಎ.ಬಿ.ವಿ.ಪಿ. ಆಗ್ರಹಿಸಿದೆ. ಈ ಬಗ್ಗೆ ಗುರುರಾಜ್ ಎಂಬ ವಿಧ್ಯಾರ್ಥಿ ಭಗವದ್ಗೀತೆಯ ಮೇಲೆ ಆಣೆ ಮಾಡಿ ಉಪನ್ಯಾಸಕಿ ಮೇಲೆ ಗಂಭೀರ ಆರೋಪ ಕೂಡ ಮಾಡಿದ್ದಾನೆ.