ಬೆಂಗಳೂರು: ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿಲ್ಲ. ಮಾಡುವ ಅಗತ್ಯವೂ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಪಹಲ್ಗಾಮ್ ಘಟನೆಗೆ ಬಗ್ಗೆ ಮೊದಲ ಬಾರಿಗೆ ನಗರದಲ್ಲಿ ಮಾತನಾಡಿದ ಅವರು, ಇನ್ನು ರಾಜಕೀಯ ಪಕ್ಷದ ನಾಯಕನಾಗಿ, ಎನ್‌ಡಿಎ ಮುಖಂಡನಾಗಿ ಹೇಳುತ್ತಿದ್ದೇನೆ.
ಕೇಂದ್ರದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಕೇಂದ್ರದ ಜೊತೆಗೆ ನಾವೂ ನಿಲ್ಲುತ್ತೇವೆ. ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿಲ್ಲ. ಮಾಡುವ ಅಗತ್ಯವೂ ಇಲ್ಲ. ಅನಿವಾರ್ಯ ಎನಿಸಿದರೆ ನಾನೇ ಪತ್ರ ಬರೆಯುತ್ತೇನೆ. ಈ ಹಿಂದೆ ಸಾಕಷ್ಟು ಸಮಯದಲ್ಲಿ ಪತ್ರ ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ. ನನಗೆ ಅನಿಸಿದ್ದನ್ನ ನೇರವಾಗಿ ಹೇಳುತ್ತೇನೆ ಎಂದರು.
ಬಿಳಿ ಕೂದಲನ್ನು ಬೇರುಗಳಿಂದ ಕಪ್ಪಾಗಿಸುತ್ತೆ ಈ ಹೇರ್ ಪ್ಯಾಕ್! ಮೊಣಕಾಲುದ್ದ ಕೂದಲು ಗ್ಯಾರಂಟಿ!
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆ ಹಿಡಿದಿರುವ ವಿಚಾರ ಮತ್ತು ಯುದ್ಧ ಆಗಬೇಕು ಎಂಬ ಒತ್ತಡಗಳ ವಿಚಾರವಾಗಿ ಪ್ರತಿಕ್ರಿಯಿಸಿದರು. ಯುದ್ದ ಮಾಡಬೇಕು ಅನ್ನುವ ಸನ್ನಿವೇಶದ ಬಗ್ಗೆ ನಮ್ಮ ದೇಶದ ಪ್ರಧಾನಿಗಳು ತೀರ್ಮಾನ ಮಾಡ್ತಾರೆ.
ಇಡೀ ರಾಷ್ಟ್ರದ ನಾಯಕತ್ವ ಅಲ್ಲ. ವಿಶ್ವದಲ್ಲಿ ಮೋದಿ ಅವರಿಗೆ ಗೌರವ ಇದೆ. ವಿಶ್ವದ ಅನೇಕ ನಾಯಕರು ಈ ಘಟನೆ ಖಂಡಿಸಿದ್ದಾರೆ. ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಕೂಡಾ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ ಎಂದರು.