ಬ್ಯಾಂಕ್ ಅಲ್ಲಿ ಸಿಕ್ಕಾಪಟ್ಟೆ ಕೆಲಸ ಇದೆ, ಬೇಗ ಮುಗಿಸ್ಕೋಬೇಕು ಅಂತಿದ್ದರೆ ಇನ್ನೂ ಮೂರು ದಿನ ನಿಮ್ಮ ಕೆಲಸ ಆಗಲ್ಲ ಬಿಡಿ. ಏಕೆಂದರೆ ಇಂದಿನಿಂದ ಅಂದರೆ ಏಪ್ರಿಲ್ 29 ರಿಂದ ಮೇ 1 ರವರೆಗೆ ಸತತ ಮೂರು ದಿನಗಳ ಕಾಲ ಭಾರತದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ. ಶ್ರೀ ಪರಶುರಾಮ ಜಯಂತಿ, ಅಕ್ಷಯ ತೃತೀಯ-ಬಸವ ಜಯಂತಿ, ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ನಿಮಿತ್ತ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ.
ಕರ್ನಾಟಕದಲ್ಲಿ ಭಾನುವಾರ, ಶನಿವಾರಗಳ ಆರು ದಿನಗಳನ್ನು ಹೊರತುಪಡಿಸಿದರೆ, ಕಾರ್ಮಿಕ ದಿನಕ್ಕೆ ಮಾತ್ರವೇ ರಜೆ ಇದೆ. ಹೀಗಾಗಿ, ಮೇ ತಿಂಗಳಲ್ಲಿ ಕರ್ನಾಟಕಕ್ಕೆ ಏಳು ದಿನ ಮಾತ್ರವೇ ಬ್ಯಾಂಕುಗಳು ಬಂದ್ ಆಗಿರುತ್ತವೆ.
2025ರ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ
ಮೇ 1, ಬುಧವಾರ: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ (ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಅಸ್ಸಾಮ್ ಸೇರಿ ಬಹುತೇಕ ರಾಜ್ಯಗಳಲ್ಲಿ ರಜೆ)
ಮೇ 4: ಭಾನುವಾರದ ರಜೆ
ಮೇ 8, ಗುರುವಾರ: ಗುರು ರಬೀಂದ್ರ ಜಯಂತಿ (ದೆಹಲಿ, ಪಶ್ಚಿಮ ಬಂಗಾಳ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
ಮೇ 10: ಎರಡನೇ ಶನಿವಾರದ ರಜೆ
ಮೇ 11: ಭಾನುವಾರದ ರಜೆ
ಮೇ 12, ಸೋಮವಾರ: ಬುದ್ಧ ಪೂರ್ಣಿಮಾ (ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ದೆಹಲಿ, ಛತ್ತೀಸ್ಗಡ, ಜಾರ್ಖಂಡ್, ಹಿಮಾಚಲ, ಶ್ರೀನಗರ್, ಜಮ್ಮು, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರಾ, ಉತ್ತರಾಖಂಡ್ ರಾಜ್ಯಗಳಲ್ಲಿ ರಜೆ)
ಮೇ 16, ಶುಕ್ರವಾರ: ಸಿಕ್ಕಿಂ ರಾಜ್ಯ ಸಂಸ್ಥಾಪನಾ ದಿನ
ಮೇ 18: ಭಾನುವಾರದ ರಜೆ
ಮೇ 24: ನಾಲ್ಕನೇ ಶನಿವಾರದ ರಜೆ
ಮೇ 25: ಭಾನುವಾರ ರಜೆ
ಮೇ 26, ಸೋಮವಾರ: ಕಾಜಿ ನಜರುಲ್ ಇಸ್ಲಾಂ ಜಯಂತಿ (ತ್ರಿಪುರಾದಲ್ಲಿ ರಜೆ)
ಮೇ 29, ಗುರುವಾರ: ಮಹಾರಾಣಾ ಪ್ರತಾಪ್ ಜಯಂತಿ (ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ರಜೆ)
ಮೇ 30, ಶುಕ್ರವಾರ: ಗುರು ಅರ್ಜುನ್ ದೇವ್ ಬಲಿದಾನ ದಿನ (ಪಂಜಾಬ್ನಲ್ಲಿ ರಜೆ)
2025ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
ಮೇ 1, ಬುಧವಾರ: ಕಾರ್ಮಿಕರ ದಿನ
ಮೇ 4: ಭಾನುವಾರದ ರಜೆ
ಮೇ 10: ಎರಡನೇ ಶನಿವಾರದ ರಜೆ
ಮೇ 11: ಭಾನುವಾರದ ರಜೆ
ಮೇ 18: ಭಾನುವಾರದ ರಜೆ
ಮೇ 24: ನಾಲ್ಕನೇ ಶನಿವಾರದ ರಜೆ
ಮೇ 25: ಭಾನುವಾರ ರಜೆ
ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಕಾರ್ಯಗಳನ್ನು ಎಟಿಎಂ, ನೆಟ್ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಮಾಡಬಹುದು. ಇವು ಯಾವುದೇ ದಿನವಾದರೂ ತೆರೆದೇ ಇರುತ್ತವೆ. ದೊಡ್ಡ ಮೊತ್ತದ ವಹಿವಾಟು ಮಾಡಲು, ಡಿಡಿ ಪಡೆಯಲು, ಸಾಲಕ್ಕೆ ಅರ್ಜಿ ಸಲ್ಲಿಸಲು ಇತ್ಯಾದಿ ಕೆಲ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗುವುದು ಅನಿವಾರ್ಯವಾಗಬಹುದು. ಅಂಥ ಕೆಲಸಗಳನ್ನು ಹೊಂದಿರುವವರು ಮುಂಚಿತವಾಗಿ ರಜಾದಿನಗಳು ಯಾವತ್ತೆಂದು ತಿಳಿದಿರುವುದು ಉತ್ತಮ.