ಬೆಂಗಳೂರು:- ಹಾಲಿನ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಸದಾಶಿವ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಕರ್ನಾಟಕದಲ್ಲಿ ಇನ್ನೂ ಇದ್ದಾರೆ ಪಾಕಿಸ್ತಾನೀಯರು: ಗಡುವು ಮುಗಿದರೂ ಹೋಗದಿರಲು ಕಾರಣ?
ಟಾಟಾ ಇನ್ಸುಟ್ ಮುಂಭಾಗದಲ್ಲಿ ಓವರ್ ಟೇಕ್ ಮಾಡುವಾಗ ಆಯತಪ್ಪಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಗಾಡಿ ಚಾಲನೆ ಮಾಡುತ್ತಿದ್ದ ಬೈಕ್ ಸವಾರ ಪಾರಾಗಿದ್ದು, ಹಿಂಬಾದಿ ಸವಾರ ಸಾವನ್ನಪ್ಪಿದ್ದಾರೆ. ಸ್ಟಾರ್ ಸಿಟಿ ಟೂ ವೀಲರ್ KA 53 X 5082 ಗಾಡಿ ನಂಬರ್ ಇದಾಗಿದ್ದು, ಲಾರಿ ಚಾಲಕ ನಾಗೇಶ್ ಕುಡಿದು ಲಾರಿ ಓಡಿಸುತ್ತಿದ್ದ ಎನ್ನಲಾಗಿದೆ. ಲಾರಿಯು, ಬೆಂಗಳೂರು ಡೈರಿಯಿಂದ ನೆಲಮಂಗಲ ಕ್ಕೆ ಹೊರಿಟ್ಟಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸದಾಶಿವ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.