ಬೆಂಗಳೂರು:- ಅತಿ ಹೆಚ್ಚು ಜನದಟ್ಟಣೆ ಇರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಿ ಜೀವನ ಮಾಡೋದು ಕಷ್ಟ ಮರ್ರೆ. ಬರುವ ಸಂಬಳದಲ್ಲಿ ಅರ್ಧ ಬಾಡಿಗೆಗೆ ಹೋದ್ರೆ ಜೀವನ ಮಾಡೋದು ಹೇಗೆ ಎಂದು ಸಾಕಷ್ಟು ಮಂದಿ ಲೀಸ್ ಗೆ ಹೋಗ್ತಾರೆ.
ಆದರೆ ಲೀಸ್ ಗೆ ನೀವ್ ಬ್ರೋಕರ್ ಗಳನ್ನು ನಂಬಿ ಹೋಗ್ತಿದ್ದೀರಾ!? ಹಾಗಿದ್ರೆ ಎಚ್ಚರ ವಹಿಸಿ ಜನರೇ. ಎಸ್, ಯಾರದ್ದೋ ಮನೆ ತೋರಿಸಿ ನಾನೇ ಓನರ್ ಎಂದು ಈ ಬ್ರೋಕರ್ ಗಳು ಯಾಮಾರಿಸ್ತಾರೆ. ಇದೀಗ ಅಂತದ್ದೇ ಪ್ರಕರಣ ಒಂದು ನಗರದಲ್ಲಿ ಬೆಳಕಿಗೆ ಬಂದಿದೆ. ಲಕ್ಷ ಲಕ್ಷ ಹಣ ಕೊಟ್ಟು ಲೀಸ್ ಗೆ ಹೋದ ಜನರಿಗೆ ಹಣವೂ ಇಲ್ಲದೆ ,ಮನೆಯು ಇಲ್ಲದೆ ಬೀದಿಗೆ ಬಂದಿದ್ದಾರೆ. ಮನೆ ಮೇಲೆ ಸಾಲ ಪಡೆದು ಇಎಂಐ ಕಟ್ಟದೆ ಕಳ್ಳಾಟ ಮಾಡಿದ್ದು, ಹಲವು ಬ್ಯಾಂಕ್ ಗಳಿಂದ ಲೋನ್ ಪಡೆದು ಹಣ ಕಟ್ಟದೆ ವಂಚನೆ ಎಸಗಿದ್ದಾರೆ.
ಇನ್ನೂ ಲೀಸ್ ಗೆ ಇದ್ದವರಿಗೆ ಬ್ಯಾಂಕ್ ನೋಟಿಸ್ ನೀಡಿದ್ದು, ತಕ್ಷಣ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಇತ್ತ, ಮನೆ ಕೊಡಿಸಿದ ಅಸಾಮಿ ಇತ್ತ ಸುಳಿಯದೆ ಕಳ್ಳಾಟ ತೋರಿದ್ದಾನೆ. ಬಿಲ್ಡರ್ ರಘು ನಂಬಿ ಸುಮಾರು 32 ಕುಟುಂಬಗಳು ಮೋಸ ಹೋಗಿದ್ದು, ಪದ್ಮ ಪ್ರಭಾಕರ್ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.