ಹುಬ್ಬಳ್ಳಿ: ಕಾಯಕಕ್ಕೆ ಒತ್ತು ನೀಡಿದ ಬಸವಣ್ಣ ಹಾಗೂ ಸಮಾನತೆಗೆ ಒತ್ತು ನೀಡಿದವರು ಜಾತಿ,ಮತ, ಪಂಥ ಧರ್ಮ ಎನ್ನದೇ ಸಮಾನತೆಯ ಸಂದೇಶ ಸಾರಿದವರು ಅವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು .
ನಗರದಲ್ಲಿಂದು ವಿಶ್ವ ಗುರು ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಇಂದಿರಾ ಗಾಂಧಿ ಗಾಜಿನ ಮನೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು, ಬಸವಣ್ಣನವರ ತತ್ವಗಳು, ವಚನಗಳು ಸಮಾಜಕ್ಕೆ ದಾರಿದೀಪ ಆಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ನಮ್ಮ ಸರಕಾರ ವಿಶ್ವ ಗುರು ಬಸವೇಶ್ವರರು ನಾಡಿನ ಸಾಂಸ್ಕೃತಿಕ ರಾಯಭಾರಿ ಅಂತಾ ಘೋಷಣೆ ಮಾಡಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆತಾ ಇದ್ದೇವೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನಾಣ್ಣುಡಿಯಂತೆ ನಡೆತಾ ಇದ್ದೇವೆ ಎಂದರು.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿದ ಬಸವಣ್ಣನವರು, ಪ್ರತಿಯೊಬ್ಬರು ಜೀನವದಲ್ಲಿ ಕಾಯಕ ಮಾಡಲೇ ಬೇಕು ಎಂದಿದ್ದಾರೆ. ಸತ್ಯಶುದ್ಧ ಕಾಯಕ ದಾಸೋಹಕ್ಕೆ ಪ್ರತಿಯೊಬ್ಬರು ಮಹತ್ವ ನೀಡಿದಾಗ ಮಾತ್ರ ಜೀವನದಲ್ಲಿ ಶಾಂತಿ-ನೆಮ್ಮದಿ ಮತ್ತು ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ .
ಹನ್ನೆರಡನೇ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ಬಸವಣ್ಣನವರು ಮೂಲ ಕಾರಣಕರ್ತರು. ಸಾರ್ವಕಾಲಿಕವಾದ ಅವರ ಸಂದೇಶ– ತತ್ವಗಳನ್ನು ಎಲ್ಲರಿಗೂ ಮಾರ್ಗದರ್ಶಕ ಮತ್ತು ದಾರಿದೀಪ’ ಆಗಿವೆ. ವಿಶ್ವದಲ್ಲಿಯೇ ದೊಡ್ಡ ವಿಚಾರವಾದಿ ಎಂದು ಬಸವಣ್ಣನವರನ್ನು ಗುರುತಿಸಲಾಗುತ್ತದೆ. ಸಮಾಜವಾದ, ಸಮತಾವಾದಕ್ಕೆ ಅವರು ಬುನಾದಿ ಹಾಕಿದವರು. ಜನ ಸಾಮಾನ್ಯರಿಗೂ ಅರ್ಥವಾಗುವ ಅವರ ವಚನ ಸಾಹಿತ್ಯ ಪ್ರಜಾ ಸಾಹಿತ್ಯವಾಗಿತ್ತು ಎಂದರು.