ಹುಬ್ಬಳ್ಳಿ: ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಹಾಗೂ ದಾಳಿಯಲ್ಲಿ ಮೃತ ಭಾರತೀಯರ ಆತ್ಮಕ್ಕೆ ಶಾಂತಿ ಕೋರಿ ಹುಬ್ಬಳ್ಳಿ ಪಾಸ್ಟರ್ಸ್ ಹಾಗೂ ಇವೆಂಗಲಿಸ್ಟ್ಸ್ ಫೆಲೋಶಿಪ್ ವತಿಯಿಂದ ನಗರದ ಗದಗ ರಸ್ತೆಯಲ್ಲಿನ ಸನ್ ಪೀಟರ್ ಚರ್ಚ್ ನಲ್ಲಿ ಮಂಗಳವಾರ ಸಂಜೆ ಮೇಣ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾನವೀಯತೆ ಮರೆತ ಉಗ್ರರು ಕೆಲವು ಕಡೆ ಇದ್ದೆ ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಅವರನ್ನು ಮೂಲೋತ್ಪಾಟನೆ ಮಾಡಬೇಕು. ಉಗ್ರವಾದ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು. ಮೃತರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸಲಾಯಿತು. ಹು-ಧಾ ಮಹಾನಗರ ಪಾಲಿಕೆ ಸದಸ್ಯ ಧೋರಜ್ ಮನ್ನೆಕುಂಟ್ಲ, ಮಾಜಿ ಸದಸ್ಯೆ ಸುಧಾ ಮನ್ನೆಕುಂಟ್ಲ, ಪ್ರಮುಖರಾದ ರೆವೆರೆಂಡ್ ಜೆ. ನಿಕೋಲಸ್, ವೈ. ಜಾಲಯ್ಯ, ಪೆಂಡೆಮ್ ಡ್ಯಾನಿಯಲ್, ಸುನಿಲ್ ಮಾಡೆ, ಓಬಲ್ ರಾವ್, ಇತರರು ಭಾಗವಹಿಸಿದ್ದರು.