ವಿಜಯಪುರ: ಕಾಶಪ್ಪನವರ್ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಶಿವಾನಂದ ಪಾಟೀಲ್ಗೆ ಬಾಗೇವಾಡಿಯಲ್ಲಿ ಏನೂ ಸಿಗುತ್ತಿಲ್ಲ, ಹಾಗಾಗಿ ಅವರಿಗೆ ವಿಜಯಪುರ ಬರೋದು ಬೇಕಾಗಿದೆ, ಅವರು ಇಲ್ಲಿಂದ ಸ್ಪರ್ಧಿಸಿದರೆ ಮಣ್ಣು ಮುಕ್ಕೋದು ಗ್ಯಾರಂಟಿ,
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಯಾಕೆಂದರೆ ಎಲ್ಲ ಹಿಂದೂಗಳು ನನಗೆ ವೋಟು ಹಾಕುತ್ತಾರೆ, ಶಿವಾನಂದ್ ಗೆ ಮುಸಲ್ಮಾನರ ವೋಟು ಸಹ ಸಿಗಲ್ಲ, ಯಾಕೆಂದರೆ ಮುಸಲ್ಮಾನರು ತಮ್ಮ ಸಮುದಾಯದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸುತ್ತಾರೆ ಎಂದು ಯತ್ನಾಳ್ ಹೇಳಿದರು.
ನನ್ನ ವಿರುದ್ಧ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಯಾರಾದರೂ ಭಾರತ ಮಾತಾಕಿ ಜೈ ಅಂದ್ರಾ, ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿದ್ದಾರಾ? ಕಾಂಗ್ರೆಸ್ ಸಚಿವ, ಶಾಸಕರನ್ನು ಮುಸ್ಲಿಂ ಮುಖಂಡರು ಬ್ಲಾö್ಯಕ್‌ಮೇಲ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವವರಿಗೆ ಚಪ್ಪಲಿಯಿಂದ ಹೊಡೆಯಿರಿ. ಅವರ ಪರವಾಗಿ ನಾನು ಇರುತ್ತೇನೆ. ಅವರ ವಕಾಲತ್ತು ನಾನು ನೋಡಿಕೊಳುತ್ತೇನೆ ಎಂದರು.