ಪ್ರೀತಿಸಿ ಕೈ ಹಿಡಿದವರು ಧೀಡೀರ್ ಅಂತಾ ದೂರವಾದ್ರೆ ಆ ನೋವನ್ನು ಯಾರಿಂದಲೂ ಮರೆಯಲು ಆಗೋದಿಲ್ಲ. ಸದಾ ಅವರ ನೆನಪು ನಮ್ಮನ್ನು ಕಾಡುತ್ತಲೇ ಇರುತ್ತದೆ. ಇದೀಗ ಪತಿ ಚಿರಂಜೀವಿ ನೆನಪಿನಲ್ಲಿ ಮೇಘನಾ ರಾಜ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚಿರು ಮೇಘನಾ ಪ್ರೀತಿಸಿ ಮದುವೆಯಾದವರು. ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ ಹೃದಯಾಘಾತದಿಂದ ಚಿರು ಕೊನೆಯುಸಿರೆಳೆದರು. ಆ ನೋವು ಅವರನ್ನು ಬಾಧಿಸುತ್ತಲೇ ಇದೆ. ಚಿರು ನೆನಪಿನಲ್ಲಿ ಬದುಕು ಸಾಗಸುತ್ತಿರುವ ಮೇಘನಾಆ ರಾಜ್ ಸದಾ ನಿನ್ನೊಂದಿಗೆ ಎಂದು ಪತಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
ಮೇಘನಾ ರಾಜ್ ಎರಡನೇ ಮದುವೆಯಾಗುತ್ತಾರೆ ಎಂಬ ವದಂತಿ ಜೋರಾಗಿ ಹಬ್ಬಿತ್ತು. ಈ ವದಂತಿಗೆ ಅವರು ಗುನ್ನ ಹೊಡೆದಿದ್ದಾರೆ. ಸದಾ ನಿನ್ನೊಂದಿಗೆ ಎನ್ನುತ್ತಾ ಎರಡನೇ ಮದುವೆ ಗಾಸಿಪ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಮೇಘನಾ ರಾಜ್ ಫ್ಯಾಮಿಲಿ, ಮಗ, ಸಿನಿಮಾ ಅಂತಾ ಬ್ಯುಸಿಯಾಗಿದ್ದಾರೆ. ಮಗ ರಾಯನ್ ಹಾರೈಕೆಯಲ್ಲಿ ಅವರು ಬ್ಯುಸಿಯಾಗಿದ್ದಾರೆ. 2018, ಮೇ 2ರಂದು ಚಿರು-ಮೇಘನಾ ಹಸೆಮಣೆ ಏರಿದ್ದರು.