ಉಡುಪಿ: ಮಂಗಳೂರು ಸಮೀಪದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗಲಾಟೆ ಸಂಭವಿಸಿ, ಗುಂಪೊಂದು ಯುವಕನ ಮೇಲೆ ಹಲ್ಲೆಗೈದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ಈವರೆಗೆ 20 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಇನ್ನೂ ವಿಚಾರವಾಗಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ಕೃತ್ಯ ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಭಾರತದ ವಿರುದ್ಧ ಪಾಕಿಸ್ತಾನ ಯುದ್ಧದ ಬೆದರಿಕೆ ಹಾಕುತ್ತಿದೆ. ದೇಶದೊಳಗಿನ ಶತ್ರುಗಳು ಇದಕ್ಕಿಂತ ಹೆಚ್ಚು ಅಪಾಯಕಾರಿ. ಈ ದೇಶದ ಉಪ್ಪು ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಈ ಮನಃಸ್ಥಿತಿ ಬಾಹ್ಯ ಶತ್ರುಗಳಿಗಿಂತ ಕೆಟ್ಟದು ಎಂದು ಎಂದು ಟೀಕಿಸಿದ್ದಾರೆ.
ಮಸೀದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಿಸಿದ್ದಾಯ್ತು. ವಿಧಾನಸೌಧದಲ್ಲೂ ಪಾಕ್ ಪರ ಘೋಷಣೆಯಾಯ್ತು. ಈಗ ಕ್ರಿಕೆಟ್ ಅಂಗಳದಲ್ಲೂ ಪಾಕ್ ಪ್ರೇಮ. ಇಂತಹ ದೇಶ ವಿರೋಧಿಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಖಂಡಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಪಾಕ್‌ಗೆ ಜೈ ಎಂದವರ ಕೃತ್ಯ ಖಂಡಿಸಲಾಗಿದೆ. ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸ್ ಕಿರುಕುಳವನ್ನು ಸಮಾಜ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.