ಬೆಂಗಳೂರು: ಅಕ್ಷಯ ತೃತೀಯ ಹಿನ್ನಲೆ ಜ್ಯುವೆಲ್ಲರಿ ಶಾಪ್ ತೆರೆಯಲು ತೆರಳುತಿದ್ದ ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಶ್ರೀರಾಮ್ ಪುರದಿಂದ ನ್ಯೂಬಿಎಲ್ ಕಡೆಗೆ ತೆರಳುತ್ತಿದ್ದಾಗ ನಡೆದಿದೆ. ಹರ್ಷ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಧೈವಿಯಾಗಿದ್ದು,
ಸಚಿನ್ ಗೆ ಗಾಯಗಳಾಗಿದೆ. ಮೃತ ಹಾಗೂ ಗಾಯಾಳು ಇಬ್ಬರು ಶ್ರೀರಾಮ ಪುರದ ನಿವಾಸಿಗಳಾಗಿದ್ದು, ಅಕ್ಷಯ ತೃತೀಯ ಹಿನ್ನಲೆ ನಿಗದಿತ ಸಮಯಕ್ಕಿಂತ ಬೇಗ ಶಾಪ್ ತೆರೆಯಲು ತೆರಳುವಾಗ ಅಪಘಾತ ಸಂಭವಿಸಿದೆ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಸ್ಥಳಕ್ಕೆ ಸದಾಶಿವನಗರ ಸಂಚಾರ ಪೋಲಿಸರು ಭೇಟಿ ಮಾಡಿದ್ದು, ಮರಣೋತ್ತರ ಪರೀಕ್ಷೆಗೆಂದು ಹರ್ಷ ಮೃತದೇಹ ಎಮ್ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಚಿನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.