ಮಾಸ್ ಕಮರ್ಷಿಯಲ್ ಸಿನಿಮಾಗಳ ಮೂಲಕ ಫೇಮಸ್ ಆಗಿರುವ ಮಾಸ್ ಆಫ್ ಗಾಢ್ ಖ್ಯಾತಿಯ ನಂದಮೂರಿ ಬಾಲಕೃಷ್ಣ ರಜನಿಯ ಜೈಲರ್ 2ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಈಗ, ಬಾಲಯ್ಯ ಅಧಿಕೃತವಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ದೃಢಪಟ್ಟಿದೆ. ಶೀಘ್ರದಲ್ಲೇ ಚಿತ್ರತಂಡ ಈ ಬಗ್ಗೆ ಘೋಷಣೆ ಮಾಡಲಿದೆ.
ಜೈಲರ್ ಮೊದಲ ಭಾಗದಲ್ಲಿ ಬಾಲಯ್ಯ ಅವರನ್ನು ಕರೆತರೋದಿಕ್ಕೆ ನಿರ್ದೇಶಕ ನೆಲ್ಸನ್ ತಯಾರಿ ನಡೆಸಿದ್ದರು. ಆದ್ರೆ ಅದ್ಯಾಕೋ ಬಾಲಯ್ಯಗಾಗಿ ರೂಪಿಸಿದ್ದ ಪಾತ್ರದ ಬಗ್ಗೆ ಸ್ವತಃ ನೆಲ್ಸನ್ ಅವರಿಗೆ ಇಷ್ಟವಾಗಿರಲಿಲ್ಲವಂತೆ, ಹೀಗಾಗಿ ಬಾಲಯ್ಯ ಅವರನ್ನು ಅಪ್ರೋಚ್ ಮಾಡಿರಲಿಲ್ಲವಂತೆ, ಇದೀಗ ಜೈಲರ್ 2 ಅಖಾಡಕ್ಕೆ ಬಾಲಯ್ಯ ಬಾಬು ಎಂಟ್ರಿ ಖಚಿತವಾಗಿದ್ದು, ಈ ವಿಷಯ ಫ್ಯಾನ್ಸ್ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
https://x.com/surbalutwt/status/1917488297510854752
ತೆಲುಗು ಚಿತ್ರರಂಗದಲ್ಲಿ ಬಾಲಯ್ಯಗೆ ಇರುವ ಕ್ರೇಜ್ ಬಗ್ಗೆ ಹೇಳೊದೇನು ಬೇಡ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್2ನಲ್ಲಿ ಬಾಲಯ್ಯ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಇಬ್ಬರು ಸೂಪರ್ ಸ್ಟಾರ್ಸ್ ಜುಗಲ್ಬಂಧಿ ನೋಡೋದಿಕ್ಕೆ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಶಿವಣ್ಣ ಕೂಡ ನಟಿಸುತ್ತಿದ್ದು, ಈ ಮೂವರು ಕಾಂಬೋ ಸಖತ್ ಕಿಕ್ ಕೊಡಲಿದೆ. ಜೈಲರ್ 2 ಕ್ರೇಜಿಯೆಸ್ಟ್ ಪ್ರಾಜೆಕ್ಟ್ ಆಗಲಿದೆ ಅನ್ನೋದಂತು ಖಚಿತವೇ.
ಜೈಲರ್-2 ಸಿನಿಮಾಗೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಿಕ್, ನೆಲ್ಸನ್ ದಿಲೀಪ್ಕುಮಾರ್ ಟೇಕಿಂಗ್ ಇರಲಿದೆ. ರಮ್ಯಾ ಕೃಷ್ಣ, ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಬಳಗದ ಸಿನಿಮಾದಲ್ಲಿದೆ. ಕೇರಳದಲ್ಲಿ ಇತ್ತೀಚೆಗೆ ಶೂಟಿಂಗ್ ಮುಗಿಸಿಕೊಂಡು ರಜನಿ ವಾಪಸ್ ಆಗಿದ್ದಾರೆ. ಈ ವರ್ಷಾಂತ್ಯಕ್ಕೆ ಜೈಲರ್ 2 ಸಿನಿಮಾ ಬರುವ ನಿರೀಕ್ಷೆ ಇದೆ.