ಇಂದು ನವದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ೮೯೪ನೇ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣನವರು ತಮ್ಮ ಇಲಾಖೆಯ ಮುಖೇನ ಆಯೋಜಸಿ, ಅತ್ಯಂತ ಯಶಸ್ವಿಯಾಗಿ ದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಬಸವ ಜಯಂತಿಯನ್ನು ಆಯೋಜಿಸುವಲ್ಲಿ ಸಫಲರಾಗಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರುಗಳನ್ನು, ರಾಜ್ಯದ ಸಂಸದರುಗಳನ್ನು, ಮಠಾಧೀಶರುಗಳನ್ನು ಮತ್ತು ಬಸವಾಭಿಮಾನಿಗಳನ್ನು, ದೆಹಲಿ ಕನ್ನಡಿಗರನ್ನು ವಿ.ಸೋಮಣ್ಣನವರು ಆಹ್ವಾನಿಸಿದ್ದರು.
ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕಿರಣ ರಿಜಿಜು, ರೇಲ್ವ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಮತ್ತು ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಸಚಿವ ಶ್ರೀ ಪ್ರಹ್ಹಾದ್ ಜೋಶಿ, ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ, ರೇಲ್ವೆ ರಾಜ್ಯ ಖಾತೆಯ ಸಚಿವ ಶ್ರೀ ರವನೀತ ಸಿಂಗ್, ಜಲಶಕ್ತಿ ರಾಜ್ಯ ಖಾತೆಯ ಸಚಿವ ಶ್ರೀ ರಾಜಬೂಷಣ್ ಚೌಧರಿ,
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಸಂಸದರಾದ ಪಿ.ಸಿ.ಗದ್ದಿಗೌಡರ, ಶ್ರೀ ತೇಜಸ್ವಿ ಸೂರ್ಯ, ಮಾಜಿ ಸಂಸದರಾದ ಡಾ. ಉಮೇಶ್ ಜಾದವ್, ಶ್ರೀ ಅಣ್ಣಾ ಸಾಹೆಬ್ ಜೊಲ್ಲೆ, ಶಾಸಕರಾದ ಶ್ರೀ ಬಿ. ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಡಾ.ಎಮ್. ಜಿ. ಮೂಳೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಶ್ರೀ ಬಸವ ಮೃತ್ಯುಂಜಯ ಸ್ವಾಮಿಗಳು, ಡಾ. ಬಸವ ಪ್ರಕಾಶ ಸ್ವಾಮಿ, ಶ್ರೀ ಬಸವಕುಮಾರ್ ಸ್ವಾಮಿ ಹಾಗೂ ಮತ್ತು ಅಸಂಖ್ಯಾತ ಕನ್ನಡಿಗರು ಇಂದು ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಬಸವ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ.
ಕಾರ್ಯಕ್ರಮದ ಆಯೋಜನೆಗೆ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾರವರು ಅನುಮತಿ ನೀಡಿ ಬಸವೇಶ್ವರರ ಪುತ್ಥಳಿಗೆ ಅಪಾರ ಗೌರವ ಸಲ್ಲಿಸಲು ಕಾರಣಿಕರ್ತರಾಗಿದ್ದಾರೆಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣನವರು, ಜಾತಿ ರಹಿತ ಮತ್ತು ವರ್ಗರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಬಸವಣ್ಣನವರು, ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ಆರೋಗ್ಯವಂತ ಸಮಾಜಕ್ಕೆ ಅಡಿಪಾಯ ಹಾಕಿದವರು ಶ್ರೀ ಬಸವೇಶ್ವರರು ಎಂದಿದ್ದಾರೆ.
ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಸಾಮಾನ್ಯ ಬದುಕಿನ ಎಲ್ಲಾ ಸ್ಥರಗಳು ಆ ಚಳುವಳಿಯ ಒಂದು ಭಾಗವಾದ್ದದ್ದು ಶರಣರ ಪೂರ್ಣ ದೃಷ್ಟಿಯ ಸಂಕೇತ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.
ಬಸವಣ್ಣನವರು ವಿದ್ಯೆಯೆಂಬ ಆಯುಧವನ್ನು ಸಮಾಜದ ಎಲ್ಲಾ ವರ್ಗದ ಹಿಂದುಳಿದವರ, ಶೋಷಿತ ವರ್ಗದ ಹಾಗೂ ಮಹಿಳೆಯರ ಉದ್ಧಾರಕ್ಕಾಗಿ ತೊಡಗಿಸಿಕೊಂಡಿದ್ದರು. ಜೀವನದ ಸತ್ಯತೆಗಳನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ ಬಸವಣ್ಣನವರ ವಚನಗಳು ಬಹು ಮುಖ್ಯ ಪಾತ್ರ ವಹಿಸಿದೆ ಎಂದು ಸೋಮಣ್ಣ À ದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಇಂದು ಮಾತನಾಡಿದ್ದಾರೆ.
ಬಸವಣ್ಣನವರ ಅನುಭವ ಮಂಟಪ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿತ್ವದೊಂದಿಗೆ ಲಿಂಗಬೇದ ರಹಿತ ಸಮಾನತೆಯೊಂದಿಗೆ ಅಭಿವ್ಯಕ್ತಿ ಸ್ವಾತಂತ್ಯದ ವೇದಿಕೆಯಾಗಿತ್ತು. ಅನುಭವ ಮಂಟಪದ ಆ ವೇದಿಕೆಯೆ ಇಂದಿನ ನಮ್ಮ ಮುಂದಿರುವ ಸಂಸತ್ತು ಎಂದು ವಿ. ಸೋಮಣ್ಣ ಪುನರುಚ್ಚರಿಸಿದ್ದಾರೆ.
ಇಂಗ್ಲೆAಡ್ನಲ್ಲಿ ಮ್ಯಾಗ್ನಾ ಕಾರ್ಟರ ಪರಿಕಲ್ಪನೆಯ ಸಂಸತ್ತು ಜಾರಿಗೆ ಬರುವ ಮೊದಲೇ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಸವಣ್ಣನವರು ಸಂಸತ್ತಿನ ಪರಿಕಲ್ಪನೆ ಸೃಷ್ಟಿಸಿದ್ದು – ಅನುಭವ ಮಂಟಪ ರೂವಾರಿಯಾಗಿದ್ದರು ಎಂದು ಅನುಭವ ಮಂಟಪದ ಹಿರಿಮೆ ಗರಿಮೆಯನ್ನು ಇಂದು ಸೋಮಣ್ಣ ಸಂಸತ್ತಿನಲ್ಲಿ ಆವರಣದಲ್ಲಿ ಕೊಂಡಾಡಿದ್ದಾರೆ.
ಶ್ರೀ ಬಸವಣ್ಣನವರ ಕಾಯಕ ತತ್ವದ ಪ್ರತಿಪಾದನೆಯಲ್ಲಿಯೇ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರು ಈ ದೇಶವನ್ನು ಮುನ್ನೆಡಿಸುತ್ತಿದ್ದಾರೆ. ಬಸವಣ್ಣನವರು ೧೨ನೇ ಶತಮಾನದಲ್ಲಿ; ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ – ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂಬ ಸೂತ್ರವನ್ನು ಜಗಜ್ಯೋತಿ ಬಸವಣ್ಣನವರು ಜಗತ್ತಿಗೆ ಪರಿಚಯಿಸಿದ್ರು.
ಇಂದು ೨೧ನೇ ಶತಮಾನದಲ್ಲಿ ಇದೇ ತತ್ವದಡಿಯಲ್ಲಿ ಕಾಯಕ ಮಾಡುತ್ತಿದ್ದಾರೆ ಆಧುನಿಕ ಜಗತ್ತಿನ ಅಭಿವೃದ್ದಿಯ ಹರಿಕಾರ, ಕಾಯಕಯೋಗಿ ಪ್ರದಾನಿ ಮೋದಿಯವರು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತ ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲ ರಾಷ್ಟçವಾಗಬೇಕೆಂಬ ಹಂಬಲದಿAದ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ೧ಸಬ್ಕಾ ಪ್ರಯಾಸ್, ಎಂಬ ಧ್ಯೇಯ ಮಂತ್ರದೊAದಿಗೆ ಪ್ರಧಾನಿ ಮೋದಿಯವರು ಈ ದೇಶವನ್ನು ಮುನ್ನೇಡುಸುತ್ತಿದ್ದಾರೆ ಮೋದಿಯವರು ಆಧುನಿಕ ಭಾರತದ “ಕಾಯಕಯೋಗಿ ಬಸವಣ್ಣ” ಎಂದರೆ ತಪ್ಪಾಗಲಾರದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ನವದೆಹಲಿಯಲ್ಲಿ ಬಸವಜಯಂತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಜಗಜ್ಯೋತಿ ಬಸವಣ್ಣನವರ ೮೯೪ನೇ ಜಯಂತಿಯನ್ನು ಸಂಸತ್ತಿನ ಆವರಣದಲ್ಲಿ ಅಚರಿಸಲು ಸನ್ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಮತ್ತು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಅನುಮತಿಯನ್ನು ನೀಡಿದ್ದಾರೆ.
ಬಸವಮೂರ್ತಿ ಸಂಸತ್ತಿನ ಆವರಣದಲ್ಲಿ ಸ್ಥಾಪನೆಯಾಗಿ ಸುಮಾರು ೨೨ ವರ್ಷಗಳ ನಂತರ ಇಂತಹ ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸಿಲು ಅವಕಾಶ ಸಿಕ್ಕಿದೆ. ಇದು ಕನ್ನಡ ನಾಡಿನ ಸಮಸ್ತ ಜನತೆಗೆ ಸಂಸತ್ತಿನ ಮುಖೇನ ಭಾರತ ಸರ್ಕಾರ ನೀಡಿದ ಮಹಾ ಗೌರವ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.