ನವದೆಹಲಿ:- ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ರೈತರನ್ನು ದೇಶದ ಬೆನ್ನೆಲುಬು ಅಂತಲೇ ಕರೆಯಲಾಗುತ್ತದೆ. ಕೆಂದ್ರ ಸರ್ಕಾರದಿಂದ ದೇಶದ ರೈತರಿಗೆ ಅನುಕೂಲವಾಗುವಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯ ಬಳಿಕ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು 4 ಉನ್ನತ ಮಟ್ಟದ ಸಭೆ ನಡೆಸಿದರು.
ಅದರಲ್ಲಿ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಸಭೆಯು ತುಂಬಾನೇ ಮಹತ್ವ ಪಡೆದುಕೊಂಡಿತ್ತು. ಐದಾರು ವರ್ಷಗಳ ನಂತರ ನಡೆದ ಸಭೆಯಲ್ಲಿ ಜಾತಿಗಣತಿ, ಜನಗಣತಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇನ್ನು, ಪಹಲ್ಗಾಮ್ ದಾಳಿ ವಿಚಾರವಾಗಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ.
ನರೇಂದ್ರ ಮೋದಿ ಸಭೆಯ ಪ್ರಮುಖ ಹೈಲೆಟ್ಸ್..!
* ದೇಶದಲ್ಲಿ ಜಾತಿ ಗಣತಿ ಮತ್ತು ಜನಗಣತಿ ಮಾಡುವುದು
* ಜಾತಿ ಗಣತಿಯ ಮೂಲ ಜನಗಣತಿಯಲ್ಲೇ ಸೇರಿಸುವ ನಿರ್ಧಾರ
* ಕಬ್ಬು ಬೆಳೆಗಾರರಿಗೆ ಗುಡ್ನ್ಯೂಸ್, ಎಫ್ಆರ್ಪಿ ಹೆಚ್ಚಳ
* ಕ್ವಿಂಟಾಲ್ಗೆ 355 ರೂ ನಿಗಧಿ, ಅದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಿಲ್ಲ
* ಶಿಲ್ಲಾಂಗ್‌ನಿಂದ ಸಿಲ್ವರ್ ಕಾರಿಡಾರ್ ಯೋಜನೆಗೆ ಅನುಮೋದನೆ
* ಮೇಘಾಲಯದಿಂದ ಅಸ್ಸಾಂಗೆ ಸಂಪರ್ಕಿಸುವ ಹೊಸ ಹೆದ್ದಾರಿ ಇದು
* 166.8 ಕಿಲೋ ಮೀಟರ್ ಉದ್ದದ ಚತುಷ್ಪಥ ರಸ್ತೆಗೆ ಕೇಂದ್ರ ಸರ್ಕಾರ ಅನುಮತಿ