ಬೆಂಗಳೂರು/ನವದೆಹಲಿ:- ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆ ಹೊಡೆತ ಬಿದ್ದಿದೆ. ಕರ್ನಾಟಕದ ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ ಹಾಗೂ ಮದರ್ ಡೈರಿ ಹಾಲಿನ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದ ಬೆನ್ನಲ್ಲೇ ಇದೀಗ ಜನಪ್ರಿಯ ಡೈರಿ ಬ್ರಾಂಡ್ ಅಮುಲ್ ಹಾಲಿನ ದರ ಕೂಡ ಎರಡು ರೂಪಾಯಿ ಹೆಚ್ಚಳವಾಗಿದೆ.
ಬೆಂಗಳೂರಿಗರಿಗೆ ಬಿಗ್ ಶಾಕ್: ಆಟೋ ಪ್ರಯಾಣ ದರ ಏರಿಕೆ ಖಚಿತ! ಜಾರಿ ಯಾವಾಗ?
ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್ಟ್ರಿಮ್, ಅಮುಲ್ ಚಾಯ್ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್ಗಳಿಗೆ ಅನ್ವವಾಗುತ್ತದೆ.
ಅಮುಲ್ ಹಾಲು ದರ ಏರಿಕೆ: ಯಾವ ಪ್ಯಾಕೆಟ್ಗೆ ಎಷ್ಟು?
ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)
ಹಳೆಯ ಬೆಲೆ: 30 ರೂ.
ಹೊಸ ಬೆಲೆ: 31 ರೂ.
ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ
ಹಳೆಯ ಬೆಲೆ: 36 ರೂ.
ಹೊಸ ಬೆಲೆ: 37 ರೂ.
ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)
ಹಳೆಯ ಬೆಲೆ: 33 ರೂ.
ಹೊಸ ಬೆಲೆ: 34 ರೂ.
ಅಮುಲ್ ಗೋಲ್ಡ್ ಹಾಲು (1 ಲೀಟರ್)
ಹಳೆಯ ಬೆಲೆ: 65 ರೂ.
ಹೊಸ ಬೆಲೆ: 67 ರೂ.