ಭಾರತ ಸರ್ಕಾರ ಆಯೋಜಿಸಿರುವ ವೇವ್ಸ್ ಶೃಂಗಸಭೆ (ವಿಶ್ವ ಆಡಿಯೋ ವಿಷುವಲ್ ಎಂಟರ್ಟೈನ್ಮೆಂಟ್ ಸಮ್ಮಿಟ್) ಇಂದಿನಿಂದ ಪ್ರಾರಂಭವಾಗಿದೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ವಿಶ್ವದ ಉನ್ನತ ಮಾಧ್ಯಮ ಸಿಇಒಗಳು, ಮನರಂಜನಾ ಐಕಾನ್‌ಗಳು, ಸೆಲೆಬ್ರಿಟಿಗಳು ಮತ್ತು ಜಗತ್ತಿನಾದ್ಯಂತದ ಸೃಜನಶೀಲ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವೇವ್ಸ್ ಶೃಂಗ ಸಭೆಯಲ್ಲಿ ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ಹೇಮಾ ಮಾಲಿನಿ, ಶಾರುಖ್ ಖಾನ್, ಅಕ್ಷಯ್ ಕುಮಾರ್, ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್ ಸೇರಿದಂತೆ ಬಹುತೇಕ ಸ್ಟಾರ್ಸ್ ಭಾಗಿಯಾಗಿದ್ದಾರೆ. ಆದ್ರೆ ಕನ್ನಡ ಚಿತ್ರರಂಗದ ಯಾವುದೇ ತಾರೆಯರಿಗೆ ಆಹ್ವಾನ ನೀಡಿಲ್ವಾ? ಅಥವಾ ಆಹ್ವಾನವಿದ್ದರೂ ಹೋಗಿಲ್ವಾ ಅನ್ನೋದಂತು ಗೊತ್ತಿಲ್ಲ.
ವೇವ್ಸ್ ಶೃಂಗಸಭೆ ಆರಂಭಕ್ಕೂ ಮುನ್ನ ಭಾರತೀಯ ಚಿತ್ರರಂಗದ ಲೆಜೆಂಡರಿಗಳು ಒಂದೇ ಫೋಟೋ ಪ್ರೇಮ್ ನಲ್ಲಿ ಸೆರೆಯಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್, ನಟಿ ಹೇಮ ಮಾಲಿನಿ ಹಾಗೂ ಮೋಹನ್ ಲಾಲ್, ಮಿಥುನ್ ಚಕ್ರವರ್ತಿ ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ದಿಗ್ಗಜರನ್ನು ಒಂದೇ ಫ್ರೇಮ್ ನಲ್ಲಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.