ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ಸಿನಿಮಾ ಬಿಲ್ಲ ರಂಗ ಬಾಷಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರದ ಯಾವುದೇ ಫೋಟೋ ಅಥವಾ ವಿಡಿಯೋ ವೈರಲ್ ಆಗದಂತೆ ಚಿತ್ರತಂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅದಕ್ಕಾಗಿ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಿದೆ. ಶೂಟಿಂಗ್ ಪ್ರೊಸೆಸಿಂಗ್ ವಿಡಿಯೋವೊಂದನ್ನು ಚಿತ್ರತಂಡ ಶೇರ್ ಮಾಡಿದೆ. ಅದ್ರಲ್ಲಿ ಕಿಚ್ಚ ಕನ್ನಡಿ ಮುಂದೆ ಕುಳಿತು ಮೇಕಪ್ ಹಾಕಿಕೊಳ್ಳುವಾಗ ಕುತ್ತಿಗೆಯಲ್ಲಿ ಟ್ಯಾಟು ಅಭಿಮಾನಿಗಳನ್ನು ಕಾಡೋದಿಕ್ಕೆ ಶುರು ಮಾಡಿದೆ.
ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ವಿಡಿಯೋವೊಂದನ್ನು ನಿರ್ದೇಶಕ ಅನೂಪ್ ಭಂಡಾರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ಪ್ರಕ್ರಿಯೆಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಕಿಚ್ಚ ಸುದೀಪ್ ನಿತ್ಯದ ಎಂಟ್ರಿ ಕೂಡ ಇಂಟ್ರಸ್ಟಿಂಗ್ ಆಗಿದೆ. ತಮ್ಮ K ಅಕ್ಷರದ ಕಾರ್ ನಿಂದ ಇಳಿಯೋ ಕಿಚ್ಚ ಸುದೀಪ್ ಕ್ಯಾರವಾನ್‌ಗೆ ಹೋಗುತ್ತಾರೆ. ರೆಡಿ ಆಗುತ್ತಾರೆ. ಆ ಮೇಲೆ ಶೂಟಿಂಗ್ ಸೆಟ್‌ಗೂ ಕಾಲಿಡುತ್ತಾರೆ ನೋಡಿ.
https://x.com/anupsbhandari/status/1917798729710723295
ಶೂಟಿಂಗ್ ಅಖಾಡಕ್ಕೆ ಇಳಿಯುವ ಮುನ್ನ ಕಿಚ್ಚ ಕನ್ನಡಿ ಮುಂದೆ ಮೇಕಪ್ ಹಾಕಿಸಿಕೊಂಡಿರುವ ಕ್ಷಣವೂ ಇದೆ. ಕಂಪ್ಲೀಟ್ ಕಿಚ್ಚನ ಲುಕ್ ರಿವೀಲ್ ಮಾಡೇ ಬ್ಯಾಲುಕ್ ತೋರಿಸಲಾಗಿದೆ. ಸುದೀಪ್ ಕುತ್ತಿಗೆಯಲ್ಲಿ ಇರುವ ಟ್ಯಾಟು ಫ್ಯಾನ್ಸ್ ಕುತೂಹಲ ಹೆಚ್ಚುವಂತೆ ಮಾಡಿದೆ. ಏನಿರಬಹುದು ಆ ಟ್ಯಾಟು? ಅದನ್ನು ಡಿಕೋಡ್ ಮಾಡೋದಿಕ್ಕೆ ಫ್ಯಾನ್ಸ್ ಹರಸಾಹಸಪಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಮೂಡಿ ಬರ್ತಿರುವ ಬಿಲ್ಲ ರಂಗ ಬಾಷಾಗೆ ತೆಲುಗಿನಲ್ಲಿ ಹನುಮಾನ್ ಚಿತ್ರವನ್ನು ನಿರ್ಮಾಣ ಮಾಡಿದ್ದ ಚೈತನ್ಯ ರೆಡ್ಡಿ ಮತ್ತು ನಿರಂಜನ್ ರೆಡ್ಡಿ ಈ ಬಂಡವಾಳ ಹೂಡುತ್ತಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ಸಿದ್ಧವಾಗಲಿದೆ. ಚಿತ್ರದ ತಾರಾಬಳಗದ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.