ಬೆಂಗಳೂರು: ಇಂದಿನಿಂದ ವಾಹನ ಖರೀದಿಗೆ ಹೊಸ ತೆರಿಗೆ ನೀತಿ ಅನ್ವಯವಾಗಲಿರುವ ಹಿನ್ನೆಲೆ, ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನಗಳು ಸಹ ಜೀವಿತಾವಧಿ ತೆರಿಗೆ ಕಟ್ಟಬೇಕಿದೆ. ಮೆಟ್ರೋ, ಬಸ್ ಪ್ರಯಾಣ ದರ ಏರಿಕೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಜನರ ಆಕ್ರೋಶಕ್ಕೆ ಮತ್ತೊಮ್ಮೆ ಗುರಿಯಾಗುವಂತಹ ನಿರ್ಧಾರ ಕೈಗೊಂಡಿದೆ. ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡುವ ಮಾಲೀಕರಿಗೆ ಸರ್ಕಾರ ಶಾಕ್‌ವೊದನ್ನು ಕೊಟ್ಟಿದೆ.
ಹೌದು ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದು, ಇಂದಿನಿಂದಲೇ ಈ ನೂತನ ಆದೇಶ ಜಾರಿಗೆ ಬರಲಿದೆ. ಕಟ್ಟಡ ಸಾಮಾಗ್ರಿ ಶಿಫ್ಟಿಂಗ್ ವಾಹನಗಳು ಮತ್ತು ವಾಣಿಜ್ಯ ಬಳಕೆ, ಎಲೆಕ್ಟ್ರಿಕ್ ಕಾರುಗಳಿಗೂ ಈ ದುಬಾರಿ ಟ್ಯಾಕ್ಸ್ ಪಾವತಿ ಮಾಡಬೇಕಾಗಿದೆ.
ಊಟದ ಬಳಿಕ ಪಾತ್ರೆಗಳನ್ನು ತೊಳೆಯದೇ ಹಾಗೆ ಬಿಡ್ತೀರಾ!? ನೀವು ನೋಡಲೇಬೇಕಾದ ಸ್ಟೋರಿ!
ಈ ಹಿಂದೆ 10 ಲಕ್ಷ ರೂ. ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್‌ಗೆ ಮೂರು ತಿಂಗಳಿಗೊಮ್ಮೆ 100 ರೂ.ನಂತೆ 4 ಸೀಟ್ ವಾಹನಕ್ಕೆ 400 ರೂ.ಪಾವತಿ ಮಾಡಬೇಕಿತ್ತು. ನೂತನ ತಿದ್ದುಪಡಿ ವಿಧೇಯಕದಲ್ಲಿ ಅದನ್ನು ಬದಲಿಸಿ, 10 ಲಕ್ಷ ರೂ. ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ 5% ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ. 10 ಲಕ್ಷ ರೂ. ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದ್ರೆ ಇಂದಿನಿಂದ 50,000 ರೂ. ಲೈಫ್ ಟೈಮ್ ಟ್ಯಾಕ್ಸ್ ಪಾವತಿ ಮಾಡಬೇಕಾಗಿದೆ.
25 ಲಕ್ಷ ರೂ. ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ 10% ರಷ್ಟು ಟ್ಯಾಕ್ಸ್ ಪಾವತಿ ಮಾಡಬೇಕು. 25 ಲಕ್ಷ ರೂ. ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ್ರೆ 2.5 ಲಕ್ಷ ರೂ. ಟ್ಯಾಕ್ಸ್ ಪಾವತಿ ಮಾಡಬೇಕು. ಈ ಹಿಂದೆ 25 ಲಕ್ಷ ರೂ. ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು.
ಕಟ್ಟಡ ಸಾಮಾಗ್ರಿಗಳ ಶಿಫ್ಟಿಂಗ್ ವಾಹನಗಳ ಮೇಲೆ ಈ ಹಿಂದೆ 6% ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿತ್ತು. ನೂತನ ಆದೇಶದಲ್ಲಿ 8% ರಷ್ಟು ಲೈಫ್ ಟ್ಯಾಕ್ಸ್ ವಿಧಿಸಲಾಗಿದೆ.