ಹುಬ್ಬಳ್ಳಿ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿನ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಉಗ್ರರು ದಾಳಿ ನಡೆಸಿದ ಇದೇ ಪ್ರದೇಶದಲ್ಲೇ ಇಡೀ ದಿನ ಸಮಯ ಕಳೆದಿದ್ದ ಹುಬ್ಬಳ್ಳಿ ಮೂಲದ ಕುಟುಂಬವೊಂದು ಕೂದಲೇಳೆಯ ಅಂತರದಲ್ಲಿ ಬಚಾವ್ ಆಗಿ ಮರಳಿದೆ.
ಕಾಶ್ಮೀರದತ್ತ ಟ್ರಿಪ್ ಮಾಡಿದ್ದ ಹುಬ್ಬಳ್ಳಿಯ ಕಲ್ಯಾಣ ಶೆಟ್ಟರ್ ಕುಟುಂಬ, ದೈವ ಕೃಪೆಯಿಂದ ಉಗ್ರರ ದಾಳಿಯಿಂದ ಬಚಾವ್ ಆಗಿ ಬಂದಿದ್ದಾರೆ. ಹುಬ್ಬಳ್ಳಿಯ ಕಲ್ಯಾಣ ಶೆಟ್ಟರ್ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿ ಒಟ್ಟು 45 ಜನ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಇವರು ಹುಬ್ಬಳ್ಳಿಯಿಂದ ಏಫ್ರಿಲ್ 11ರಂದು ಬಸ್ ಮೂಲಕ ಕಾಶ್ಮೀರದತ್ತ ಪ್ರಯಾಣ ಬೆಳಿಸಿದ್ದರು. ಏಪ್ರಿಲ್ 18ರಂದು ಪೆಹಲ್ಗಾಮ್‌ನಲ್ಲಿ ಇಡೀ ದಿನ ಎಂಜಾಯ್ ಮಾಡಿದ್ದಾರೆ. ದುರ್ಗಮ ಮಾರ್ಗದಲ್ಲಿ 7 ಕಿ.ಮಿ ಬೆಟ್ಟ, ಗುಡ್ಡದಲ್ಲಿ ಕುದುರೆ ಸವಾರಿ ಮಾಡಿ ಪೆಹಲ್ಗಾಮ್ ಸೇರಿಕೊಂಡಿದ್ದಾರೆ. ಬೆಳಗ್ಗೆಯಿಂದ ಸಂಜೆಯ ತನಕವೂ ಪೆಹಲ್ಗಾಮ್ ಸ್ಥಳದಲ್ಲಿ ಆಟವಾಡಿದ್ದರು.
ದಾಳಿ ಆಗುವ ಎರಡು ದಿನದ ಹಿಂದೆನೇ ನಾವು ಪೆಹಲ್ಗಾಮ್ ದಿಂದ ರಿಟರ್ನ್ ಆಗಿದ್ದಿವಿ. ಆದ್ರೆ ಉಗ್ರರು ಕಾಡಿನ ಮಾರ್ಗವಾಗಿ ನಡೆದುಕೊಂಡು ಬಂದಿರುವ ಸಾಧ್ಯತೆಯಿದೆ. ದಾಳಿಗೂ ಮುನ್ನ ಕಾಶ್ಮೀರದಲ್ಲಿ ವಿವಿಧ ಕಡೆ ಭಾರಿ ಮಳೆ ಮತ್ತು, ಭೂ ಕುಸಿತವಾಗಿತ್ತಂತೆ. ಆದ್ರೆ ಈ ಸ್ಥಳ ಸುರಕ್ಷಿತವಾಗಿತ್ತು ಹೀಗಾಗಿ ಇದನ್ನೇ ಟಾರ್ಗೆಟ್ ಮಾಡಿ ಉಗ್ರರರು ದಾಳಿ ಮಾಡಿರಬಹುದು, ದಾಳಿಗೂ ಮುನ್ನ ಇದ್ದ ಪೆಹಲ್ಗಾಮ್ ಪ್ರವಾಸಿ ತಾಣದ ಪರಿಸ್ಥಿತಿ ಬಗ್ಗೆ ಕಲ್ಯಾಣ ಶೆಟ್ಟರ್ ಕುಟುಂಬಸ್ಥರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.