ಚಿಕ್ಕಬಳ್ಳಾಪುರ : ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಸಿಎಂಸಿ ಬಡಾವಣೆಯಲ್ಲಿ ನಡೆದಿದೆ.23 ವರ್ಷ ಎಸ್. ಝಾನ್ಸಿ ಮೃತ ಗೃಹಿಣಿ. ಗಂಡ ಈಶ್ವರ್ ಮನೆಗೆ ಬಂದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈಶ್ವರ್ ಕ್ರೇನ್ ವಾಹನದ ಅಪರೇಟರ್ ಹಾಗೂ ಮಾಲೀಕನಾಗಿದ್ದು ಮನೆಗೆ ಬಂದಾಗ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತಳಿಗೆ 1 ವರ್ಷ 2 ತಿಂಗಳ ಹೆಣ್ಣು ಮಗುವಿದ್ದು ಮಗುವಿನ ಮುಂದೆಯೇ ತಾಯಿ ಸಾವಿನ ಮನೆ ಸೇರಿದ್ದಾಳೆ. ತಾಯಿಯ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ರೆ ಮಗು ತಾಯಿಯ ಕಾಲುಗಳ ಬಳಿ ಮಲಗಿತ್ತಂತೆ.. ಮಗು ಬಿಟ್ಟು ತಾಯಿ ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುವುದೇ ನಿಗೂಢವಾಗಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.