ಬಾಗಲಕೋಟೆ: ಶ್ರೀ ಬಸವಣ್ಣನವರು ಮಾನವ ಕುಲಕ್ಕೆ ಮಾದರಿಯಾದವರು ಬಸವಣ್ಣನವರು ಹೇಳಿದ ಒಂದು ವಚನ ಭಯೋತ್ಪಾದಕರಿಗೆ ಅರ್ಥವಾಗಿದ್ದರೆ, ಜಮ್ಮು ಕಾಶ್ಮೀರ್ ಜಿಲ್ಲೆಯ ಅನಂತನಾಗ್ ಪುರದ ಪಹಲ್ಗಾಮದಲ್ಲಿ ನಾಗರಿಕರ ಹತ್ಯೆ ಆಗುತ್ತಿರಲಿಲ್ಲ ಎಂದು ಶ್ರೀ ಕುಂ ವೀರಭದ್ರಪ್ಪ ಹಿರಿಯ ಸಾಹಿತಿ ಹೇಳಿದರು.
ಜಾತಿ ರಹಿತ, ವರ್ಣರಹಿತ ಹಾಗೂ ಮೇಲೂ ಕೀಳೆಂಬುದನ್ನು ಕಿತ್ತೆಸೆದು ಸಮ ಸಮಾಜವನ್ನು ಕಟ್ಟಿದ ಮಹಾನಪುರುಷ ಬಸವಣ್ಣನವರು. ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳಬೇಕೆಂಬ ಸಂದೇಶ ಮೂಲಕ ಬಸವಣ್ಣನವರು ಕೊಡುಗೆ ನೀಡಿದ್ದಾರೆ. ಜಾತಿ ತಾರತಮ್ಯ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲಾ ಶರಣರು ವಚನಗಳಿಂದ ಸಮಾಜ ಸುಧಾರಣೆಗೆ ಹೆಚ್ಚು ಒತ್ತುಕೊಟ್ಟು ಸಮಾನತೆಗೆ ಮುನ್ನಡೆ ಬರೆದಿದ್ದಾರೆ. ಇಡೀ ವಿಶ್ವವೇ ಬಸವಣ್ಣನವರನ್ನು ಕಾಯಕಯೋಗಿ ಸಂದೇಶ ಪ್ರೇರಣೆಯಾಗಿದೆ ಎಂದರು.
ಪಹಲ್ಗಾಮ್ನಲ್ಲಿನ ಭಯೋತ್ಪಾದಕ ದಾಳಿ ; ಮೃತ ಕುಟುಂಬಗಳಿಗೆ ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಿವದಾಶಿವಯ್ಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ (ರಿ) ದೊಡ್ಡಬಳ್ಳಾಪುರ ಬೆಂಗಳೂರು ಬಾಗಲಕೋಟೆ ಜಿಲ್ಲಾ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಯಕ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕಾಯಕಯೋಗಿ 2025 ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ ಸಮಿತಿಗಳ ಪದಗ್ರಹಣ, ಪವಾಡ ಬಯಲು ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಡಾ. ಹುಲಿಕಲ್ ನಟರಾಜ ಸಂಸ್ಥಾಪಕ ಅಧ್ಯಕ್ಷರು ಕೈ.ರಾ.ವೈ.ಸಂ ಪರಿಷತ್, ಬಿ ಆರ್ ಪೊಲೀಸ್ ಪಾಟೀಲ್( ನಿವೃತ್ತ ಉಪನ್ಯಾಸಕರು), ಬಿ ಪಿ ಬಾಗ್ಯನ್ನವರ, (ಜಿಲ್ಲಾಧ್ಯಕ್ಷರು ಕೈ.ರಾ.ಪ್ರಾ.ಶಾ.ಶಿ.ಸಂಘ ಬಾಗಲಕೋಟೆ), ಸತೀಶ್ ಅಜಾರ್ (ಉದ್ಯಮಿಗಳು) ಸಿದ್ದಪ್ಪ ಮೇಣಿ. ಚಿರಂಜೀವಿ ರೋಡಕರ. ಸುರೇಶ ರಾಜಮಾನೆ, ಬಿ ಡಿ ನ್ಯಾಮಗೌಡ, ಅಶೋಕ ಬಾಗ್ಯನ್ನವರ ಮೂಕಪ್ಪ ತೇಲಿ, ನಾಗರಾಜ್ ಭಟಾಟೆಪ್ಪಗೋಳ, ಭೀಮನಗೌಡ ಪಾಟೀಲ, ರಘು ಹಿರೇಮಠ, ಸಿ ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು.