ವಿಜಯಪುರ:- ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರುಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಕೆರೆಯಲ್ಲಿ ಜರುಗಿದೆ. ತುಕಪ್ಪ ಗೌಡರ ( 47) ಸಾವನ್ನಪ್ಪಿರುವ ವ್ಯಕ್ತಿ.
ಬೇಸಿಗೆ ಬಿಸಿಲು ಹಿನ್ನೆಲೆ ಕೆರೆಯಲ್ಲಿ ಇಬ್ಬರು ಈಜಲು ತೆರಳಿದ್ದರು. ಇದರಲ್ಲಿ ಓರ್ವ ನೀರು ಪಾಲಾಗಿದ್ದರೆ, ಮತ್ತೊರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಮಾಹಿತಿ ಆಧರಿಸಿ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದು, ಮೃತದೇಹಕ್ಕಾಗಿ ಶೋಧ ನಡೆದಿದೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.