ವಿರಾಟ್ ಕೊಹ್ಲಿ ಈ ಜೆನೆರೇಶನ್ ನ ಅತ್ಯಂತ ಪ್ರತಿಭಾನ್ವಿತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು ಮತ್ತು ಜನರು ಅವರನ್ನು ಕಿಂಗ್ ಕೊಹ್ಲಿ ಅಂತಾನೆ ಕರೆಯುತ್ತಾರೆ. ವಿರಾಟ್ ಮೈದಾನದಲ್ಲಿ ತಮ್ಮ ಅದ್ಭುತವಾದ ಬ್ಯಾಟಿಂಗ್ ಮೂಲಕ ಜಗತ್ತನ್ನೆ ಸೆಳೆದಿದ್ದಾರೆ, ಮಾತ್ರವಲ್ಲದೆ, ಅವರ ಫಿಟ್ನೆಸ್ ನೋಡಿ ಅನೇಕ ಜನರು ಆಶ್ಚರ್ಯಚಕಿತರಾಗಿದ್ದಾರೆ. 36 ನೇ ವಯಸ್ಸಿನಲ್ಲಿಯೂ ಅವರು ಮೈದಾನದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವಿರಾಟ್ ಅವರ ಫಿಟ್ನೆಸ್ ಬಗ್ಗೆ ಜನ ಯಾವಾಗಲೂ ಉತ್ಸುಕರಾಗಿರುತ್ತಾರೆ. ವಿರಾಟ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ನೀಡುತ್ತಾರೆ. ಹೀಗಾಗಿ ಅವರು ಅಭಿಮಾನಿಗಳನ್ನು ಸೆಳೆಯುತ್ತಾರೆ.
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಸ್ಟಾರ್ ಬ್ಯಾಟರ್ ಆಗಿದ್ದು, ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡದಲ್ಲಿ ಆಡುತ್ತಿರುವುದು ವಿಶೇಷವಾಗಿದೆ. ಕೊಹ್ಲಿ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್ಪೋರ್ಟ್, ವಿಮಾನದಲ್ಲಿ ಪ್ರಯಾಣ ಮಾಡುವಾಗ ಅದೊಂದು ಸಾಂಗ್ ಅನ್ನು ಪದೇ ಪದೇ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್ಫೋನ್ ಹಾಕೊಂಡು ಒಂದೇ ಹಾಡನ್ನು ಪದೇ ಪದೇ ಕೇಳುತ್ತಿರುತ್ತಾರೆ.
ವಿರಾಟ್ ಕೊಹ್ಲಿ ಅಭ್ಯಾಸ ಮಾಡುವಾಗ ಹೆಚ್ಚಾಗಿ ಕೇಳುವ ಹಾಡು ಎಂದರೆ ಅದು ತಮಿಳು ಸಿನಿಮಾದ ಹಾಡು. ಅದೇ 2023ರಲ್ಲಿ ರಿಲೀಸ್ ಆಗಿರುವ ನಟ ಸಿಲಂಬರಸನ್ ಅಥವಾ ಸಿಂಬು ಅಭಿನಯದ ಪಾಥು ಥಾಲಾ ಮೂವಿಯ ನೀ ಸಿಂಗಮ್ ಧಾನ ಎನ್ನುವ ಹಾಡನ್ನು ವಿರಾಟ್ ಕೊಹ್ಲಿ ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಇದನ್ನು ಲೈವ್ನಲ್ಲೇ ಕೊಹ್ಲಿ ತಮ್ಮ ಮೊಬೈಲ್ನಲ್ಲಿ ಪ್ಲೇ ಮಾಡಿ ತೋರಿಸಿದ್ದಾರೆ.
ಸಂದರ್ಶನವೊಂದರಲ್ಲಿ ನಿಮ್ಮ ಫೇವರಿಟ್ ಸಾಂಗ್ ಯಾವುದು ಎಂದು ಕೊಹ್ಲಿ ಅವರನ್ನು ಕೇಳಲಾಗಿರುತ್ತದೆ. ಆಗ ವಿರಾಟ್ ಕೊಹ್ಲಿ, ನಾನು ಮತ್ತೆ ಮತ್ತೆ ಕೇಳುವ ಹಾಡನ್ನು ನೀವು ಕೇಳಿದ್ರೆ ಶಾಕ್ ಆಗ್ತೀರಾ ಎಂದು ತಮ್ಮ ಮೊಬೈಲ್ನಲ್ಲಿ, ನೀ ಸಿಂಗಮ್ ಧಾನ ಹಾಡನ್ನು ಪ್ಲೇ ಮಾಡಿದ್ದಾರೆ. ಇನ್ನು ಈ ಹಾಡನ್ನು ಮೂವಿಯಲ್ಲಿ ಸಿಂಗರ್ ಸಿದ್ ಶ್ರೀರಾಮ್ ಹಾಡಿದ್ದು ಇದಕ್ಕೆ ಎ.ಆರ್ ರೆಹಮಾನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.