ಬಲಗೈ ಬೆರಳಿಗೆ ಗಾಯವಾಗಿರುವ ಹಿನ್ನೆಲೆ ಐಪಿಎಲ್ನಿಂದಲೇ ರಾಜಸ್ಥಾನ್ ವೇಗಿ ಸಂದೀಪ್ ಶರ್ಮಾ ಔಟ್ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್, ಆಡಿದ 9 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಮಾತ್ರ ಜಯಗಳಿಸಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ತಂಡದ ಅನುಭವಿ ವೇಗದ ಬೌಲರ್ ಸಂದೀಪ್ ಶರ್ಮಾ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದಿದ್ದಾರೆ.
Virat Kohli: ವಿರಾಟ್ ಪದೇ-ಪದೇ ಈ ಹಾಡನ್ನು ಕೇಳ್ತಾರಂತೆ: ಯಾವ್ದು ಗೊತ್ತಾ!?
ಏಪ್ರಿಲ್ 28 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಸಂದೀಪ್ ಶರ್ಮಾ ಗಾಯಗೊಂಡಿದ್ದರು. ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನ 16 ನೇ ಓವರ್ ಎಸೆದಿದ್ದ ಸಂದೀಪ್ ಶರ್ಮಾ ಅವರ ನಾಲ್ಕನೇ ಎಸೆತವನ್ನು ಗಿಲ್ ಚೆಂಡನ್ನು ಡ್ರೈವ್ ಮಾಡಿದರು. ಸಂದೀಪ್ ತನ್ನ ಫಾಲೋ ಥ್ರೂನಲ್ಲಿ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಅವರ ಬಲಗೈ ಬೆರಳಿಗೆ ಗಾಯವಾಯಿತು. ಇದರ ಹೊರತಾಗಿಯೂ, ಅವರು ಬೌಲಿಂಗ್ ಮುಂದುವರಿಸಿ ನಾಲ್ಕು ಓವರ್ಗಳ ಕೋಟಾವನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಅವರು 4 ಓವರ್ಗಳಲ್ಲಿ 33 ರನ್ಗಳಿಗೆ ಒಂದು ವಿಕೆಟ್ ಪಡೆದರು.
ಮೇ 1 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಂದೀಪ್ ಶರ್ಮಾ ತಂಡದ ಬಸ್ಸಿನಿಂದ ಇಳಿಯುವಾಗ ಅವರ ಬಲಗೈಗೆ ಬ್ಯಾಂಡೇಜ್ ಹಾಕಲಾಗಿತ್ತು. ರಾಜಸ್ಥಾನ ರಾಯಲ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ವಿಡಿಯೋವನ್ನು ಹಂಚಿಕೊಂಡಿದೆ.