ಮಂಗಳೂರು : ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಕಾರಿಗೆ ಅಪಘಾತ ಮಾಡಿ, ಬಳಿಕ ಮಾರಕಾಸ್ತ್ರಗಳಿಂದ ಹತೈಗೈಯ್ಯಲಾಗಿತ್ತು. ಇನ್ನೂ ಸಾವನ್ನಪ್ಪಿದ ಮಗನ ನೆನೆದು ಸುಹಾಶ್ ಶೆಟ್ಟಿ ತಾಯಿ ಕಣ್ಣೀರಿಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುತ್ವಕ್ಕಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಅಂತಿದ್ದ. ಈಗ ಅವನ ಪ್ರಾಣವನ್ನೇ ತೆಗೆದರು . ನಾವು ನಿನ್ನೆ ಬೆಳಗ್ಗೆ ಮದುವೆಯ ಕೆಲಸದಲ್ಲಿದ್ದೆವು. ಹಾಗಾಗಿ ಮಗನಿಗೆ ಫೋನ್ ಮಾಡಲು ಆಗಲಿಲ್ಲ. ರಾತ್ರಿ ಕಾಲ್ ಮಾಡಿದಾಗ ಕಾಲ್ ಸಿಗುತ್ತಿರಲಿಲ್ಲ ಎಂದರು.
ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ಪರಿಹಾರ
ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. 85% ಹಿಂದೂಗಳಿದ್ದರೂ ಅವರಿಗೆ ಹೆದರಿ ಬದುಕಬೇಕಾಗಿದೆ. ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.