ಉತ್ತರಾಖಂಡ್ : ಇಂದಿನಿಂದ ಉತ್ತರಖಂಡದ ಚಾರ್‌ಧಾಮ್ ಯಾತ್ರೆ ಆರಂಭವಾಗಿದ್ದು, ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಗಿದೆ. ಕೇದಾರನಾಥ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಪ್ರತೀವರ್ಷವೂ ಆರು ತಿಂಗಳ ಕಾಲ ಚಾರ್ ಧಾಮ್ ಯಾತ್ರೆ ಇರುತ್ತದೆ. ಇನ್ನುಳಿದ ಆರು ತಿಂಗಳ ಕಾಲ ಹಿಮಪಾತವಾಗುವುದರಿಂದ ಆ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ದೀಪಾವಳಿ ಹಬ್ಬದ ಎರಡು ದಿನಗಳ ನಂತರ ಭಾಯಿ ದೂಜ್ ದಿನದಂದು ಕೇದಾರನಾಥ ದೇವಾಲಯವನ್ನು ಮುಚ್ಚಲಾಗುತ್ತದೆ.
ಕೇದಾರನಾಥ ಧಾಮ ಯಾತ್ರೆಗೆ ಹೆಲಿಕಾಪ್ಟರ್ ಸೇವೆಗಳು ಮೇ.1ರಿಂದ ಉತ್ತರಾಖಂಡದ ಸೋನ್‌ಪ್ರಯಾಗದಿಂದ ಪ್ರಾರಂಭವಾಗಿವೆ. ಹೆಲಿಕಾಪ್ಟರ್ ಮೂಲಕ ಭಕ್ತರು ಸುಲಭವಾಗಿ ದೇವಾಲಯವನ್ನು ತಲುಪಬಹುದು. ಅಕ್ಷಯತೃತೀಯದಂದು (ಬುಧವಾಋ ಏ.30) ಬೆಳಗ್ಗೆ ಗಂಗೋತ್ರಿ ದೇವಾಲಯದ ಬಾಗಿಲನ್ನು ಬೆಳಗ್ಗೆ 10:30 ಕ್ಕೆ ವಿಶೇಷ ಪೂಜೆ ಮತ್ತು ಅಭಿಷೇಕದೊಂದಿಗೆ ತೆರೆಯಲಾಯಿತು. ಇನ್ನೂ ಯಮುನೋತ್ರಿ ಧಾಮದ ಬಾಗಿಲನ್ನು ಇದೇ ದಿನ ಬೆಳಿಗ್ಗೆ 11:55 ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತರಿಗಾಗಿ ತೆರೆಯಲಾಯಿತು.
ಸಂಸ್ಕಾರ, ಸಂಸ್ಕೃತಿ ಯೋಗಾಭ್ಯಾಸ ಬೆಳೆಸಿಕೊಂಡರೆ ಮಾತ್ರ ಉಳಿಗಾಲ ; ಶಿವಶಂಕರ ಶ್ರೀ
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಿ, ಮಾತೃ ಗಂಗಾ ಮತ್ತು ಯಮುನೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.