ನವದೆಹಲಿ:- ನಮ್ಮ ದೇಶಕ್ಕೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ, ಇದು ದುರ್ದೈವ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪಾಕಿಸ್ತಾನದ ಇತಿಹಾಸದ ಬಗ್ಗೆ ಹೇಳುವುದಾದರೆ ಪಾಕಿಸ್ತಾನಕ್ಕೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂಬುದು ರಹಸ್ಯವೇನಲ್ಲ ಅದು ಇತಿಹಾಸವಾಗಿದೆ. ಆದರೆ ಇಂದು ನಾವು ಅದರಲ್ಲಿ ಭಾಗಿಯಾಗಿಲ್ಲ. ಇದು ನಮ್ಮ ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂಬುದು ನಿಜ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ದೇಶವು ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ಮತ್ತು ಧನಸಹಾಯ ನೀಡಿದೆ ಎಂದು ಒಪ್ಪಿಕೊಂಡಿದ್ದರು. ಅಮೆರಿಕಕ್ಕಾಗಿ ನಾವು ಕೊಳಕು ಕೆಲಸ ಮಾಡಿದ್ದೇವೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆ ಪುಷ್ಠಿಕರಿಸಿದೆ.
ಭಯೋತ್ಪಾದನೆಗೆ ಬೆಂಬಲ ನೀಡಿದಕ್ಕೆ ಪಾಕಿಸ್ತಾನ ಸಾಕಷ್ಟು ಅನುಭವಿಸಿದೆ. ನಾವು ಉಗ್ರವಾದದ ಹಲವು ಅಲೆಗಳನ್ನು ಎದುರಿಸಿದ್ದೇವೆ. ನಾವು ಅನುಭವಿಸಿದ ಪರಿಣಾಮವಾಗಿ ನಾವು ಸಾಕಷ್ಟು ಪಾಠಗಳನ್ನು ಸಹ ಕಲಿತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಆಂತರಿಕ ಸುಧಾರಣೆಗಳ ಮೂಲಕ ಹೋಗಿದ್ದೇವೆ. ಇದು ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂಬುದು ನಿಜ ಎಂದು ಭುಟ್ಟೋ ಹೇಳಿದ್ದಾರೆ.