ಬೆಂಗಳೂರು:- ಟೀಕೆ ಮಾಡಿದ ಬಿಜೆಪಿಯವರೇ ನಮ್ಮ ಸರ್ಕಾರದ ಗ್ಯಾರಂಟಿ ತಗೊಂಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.
SSLC EXAM ; ಶ್ರೀ ನಿಲ್ಲಿಗರೇಶ್ವರ ವಿದ್ಯಾನಿಕೇತನ ಶಾಲೆಯ ಸಿ.ಭಾವನ ರಾಜ್ಯಕ್ಕೆ ಟಾಪರ್
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಜಾರಿಗೆ ತಂದ ಪಂಚ ಗ್ಯಾರಂಟಿ ಗಳ ಬಗ್ಗೆ ಆರ್ಥಿಕ ವಾಗಿ ಬಿಜೆಪಿ ಅವರು ಟೀಕೆ ಟಿಪ್ಪಣಿ ಮಾಡಿದ್ರು. ಈಗ ಬಿಜೆಪಿಯವರು ಸೇರಿ ಎಲ್ಲರೂ ಗ್ಯಾರಂಟಿ ತಗೊಂಡಿದ್ದಾರೆ. ರಾಹುಲ್ ಗಾಂಧಿ ಯವರು ಹಿಡಿದ ಛಲವನ್ನು ಬಿಡೋದಿಲ್ಲ. ಪಾರ್ಲಿಮೆಂಟ್ ನಲ್ಲಿ ಜಾತಿಗಣತಿ ಬಗ್ಗೆ ಹೇಳಿದ್ರು. ಈಗ ಜಾತಿಗಣತಿ ಗೆ ಕೇಂದ್ರ ಸರ್ಕಾರ ಮುಂದಾಗಿದೆ. ರಾಹುಲ್ ಗಾಂಧಿ ಅವರ ಬೇಡಿಕೆ ಪರಿಗಣಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದ ತಿಳಿಸ್ತೀನಿ. ನಾವು ಜಾತಿಗಣತಿ ಯನ್ನು ಮಾಡಿದ್ದೀವಿ ಚರ್ಚೆಗೆ ಬಿಟ್ಟಿದ್ದೀ, ನೋಡೋಣ ಮುಂದೆ. ಇದೀಗ ಕೇಂದ್ರ ಸರ್ಕಾರ ಸರ್ವೆಗೆ 500 ಕೋಟಿ ಇಟ್ಟಿದ್ದಾರೆ.ಅದು ಸಾಲಲ್ಲ ಇನ್ನು ಜಾಸ್ತಿ ಹಣ ಇಡಬೇಕಾಗುತ್ತೆ. ಟ್ಯಾಕ್ಸ್ ಕಲೆಕ್ಷನ್ ನಲ್ಲೂ ರಾಜ್ಯಗಳಿಗೆ ನ್ಯಾಯ ಕೊಡುವಂತಹ ಕೆಲಸವನ್ನು ಮೋದಿ ಮಾಡಬೇಕು. ಮೋದಿ ಅವರೇ ಸಿಎಂ ಆಗಿದ್ದಾಗ ರಾಜ್ಯಗಳ ಪಾಲಿನ ಬಗ್ಗೆ ಕೇಳಿದ್ದಾರೆ, ಸಾಕ್ಷಿ ಕೊಡ್ತೀನಿ. ಈಗ ಅವರು ಪ್ರಧಾನಮಂತ್ರಿ ಸ್ಥಾನದಲ್ಲಿ ಕೂತಿದ್ದಾರೆ ರಾಜ್ಯಗಳಿಗೆ ನ್ಯಾಯ ಕೊಡಬೇಕು ಎಂದರು.
ರಾಹುಲ್ ಗಾಂಧಿ ಅವರು ಜಾತಿಗಣತಿ ಆಗಬೇಕು ಅಂತಾ ಒತ್ತಾಯ ಮಾಡಿದ್ರು. ಭಾರತ್ ಜೋಡೋ ಸಂಧರ್ಭದಲ್ಲಿ ರಾಹುಲ್ ಗಾಂಧಿ ಅವರು ನನ್ನ ಹೆಗಲ ಮೇಲೆ ಕೈಹಾಕಿ. OBC ಗೆ ಶಕ್ತಿ ತುಂಬಬೇಕು ಅಂತಾ ಹೇಳಿದ್ರು. ನಾವು ನಮ್ಮ ಚುನಾವಣಾ ಪ್ರಣಾಳಿಕೆ ಯಲ್ಲಿ ಜಾತಿಗಣತಿ ಬಗ್ಗೆ ಹೇಳಿದ್ದೊ. ಬಡವರು, ರೈತರಿಗೆ ಸಹಕಾರ ಆಗುವಂತಹಾ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ನಾವು ಕ್ಯಾಬಿನೆಟ್ ಮೂಲಕ ಜಾತಿಗಣತಿ ಯನ್ನ ತರ್ತಿದ್ದೀವಿ. ಪಬ್ಲಿಕ್ ಡೊಮೈನ್ ನಲ್ಲಿ ಅದು ಚರ್ಚೆಯಲ್ಲಿದೆ ಎಂದರು.